Sunday, January 19, 2025
ಕೃಷಿದಕ್ಷಿಣ ಕನ್ನಡಪುತ್ತೂರುಸುದ್ದಿ

ಮತ್ತೆ ಚೇತರಿಕೆ ಕಂಡ ಅಡಿಕೆ ಧಾರಣೆ : ರೈತರ ಮುಖದಲ್ಲಿ ಮಂದಹಾಸ – ಕಹಳೆ ನ್ಯೂಸ್

ಪುತ್ತೂರು : ಈ ವರ್ಷ ಇದೆ ಮೊದಲ ಬಾರಿಗೆ ಚಾಲಿ ಅಡಿಕೆ ಧಾರಣೆ ಏರಿಕೆಯತ್ತ ಮುಖ ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಕುಸಿತ ಸಾಗಿದ ಅಡಿಕೆ ರೇಟ್ ಒಂದು ಹಂತದಲ್ಲಿ 5 ವರ್ಷದ ಹಿಂದಿನ ಧಾರಣೆಗೆ ಕುಸಿಯುವ ಭೀತಿ ಎದುರಾಗಿತ್ತು. ಹೀಗಾಗಿ ಆಡಿಕೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿತ್ತು.

ಅಡಿಕೆ ಆಮದು ಹಾಗೂ ಅಡಿಕೆ ಕಳ್ಳ ಸಾಗಾಣಿಕೆ ಅಡಿಕೆ ಬೆಳೆ ಕುಸಿತದಲ್ಲಿ ಪ್ರಧಾನ ಪಾತ್ರ ವಹಿಸಿತ್ತು . ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಅಡಿಕೆ ಧಾರಣೆ ಕಡಿಮೆಯಾಗುವುದು ವಾಡಿಕೆ. ಹಾಗೂ ಮಾರ್ಚ್ ತಿಂಗಳಿನಲ್ಲಿ ರೈತರಿಗೆ ಸಾಲ ಮರು ಪಾವತಿಯ ಒತ್ತಡ ಉಂಟಾಗುವುದರಿಂದ ರೈತರು ಶೇಖರಿಸಿ ಇಟ್ಟ ಅಡಿಕೆಯನ್ನು ಈ ತಿಂಗಳಿನಲ್ಲಿ ತರುತ್ತಾರೆ. ಇದರ ಜತೆಗೆ ಮಾರುಕಟ್ಟೆಗೆ ಹೊಸ ಅಡಿಕೆ ಅವಕವಾಗುವುದರಿಂದ ಸಪ್ಲೈ ಹೆಚ್ಚಾಗಿ ದಾರಣೆ ಕುಸಿಯುವುದು ವಾಡಿಕೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೇ ಈ ಬಾರಿ ಮಾರ್ಚ್ ತಿಂಗಳ ಮೊದಲೇ ರೇಟ್ ಬಿದ್ದಿರುವುದು, ಇನ್ನೊಂದೆಡೆ ಅಡಿಕೆ ತೋಟದಲ್ಲಿ ಈ ಬಾರಿ ಇಳುವರಿ ಕಮ್ಮಿಯಾಗಿರುವುದರಿಂದ ಬೇಡಿಕೆಯಷ್ಟು ಅಡಿಕೆ ಮಾರ್ಚ್ ತಿಂಗಳಿನಲ್ಲಿ ಬಂದಿಲ್ಲ . ಇದರ ಜತೆಗೆ ಅಡಿಕೆ ಆಮದು ಎನ್ನುವುದು ವ್ಯಾರಿಗಳು ಸೃಷ್ಟಿಸಿದ್ದ ಗುಮ್ಮ ಎನ್ನುವ ಕೇಂದ್ರ ಕೃಷಿ ಸಚಿವರ ಹೇಳಿಕೆ ಅಡಿಕೆಯ ಧಾರಣೆ ಚೇತರಿಕೆಗೆ ಕಾರಣವಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಹೊರ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರದ ಹಿಂದಿನ ಧಾರಣೆ ಗಮನಿಸಿದರೆ ಹೊಸ ಅಡಿಕೆಗೆ ಕೆ.ಜಿ.ಗೆ 10 ರೂ., ಸಿಂಗಲ್ ಚೋಲ್ 15 ರೂ., ಡಬ್ಬಲ್ ಚೋಲ್ 20 ರೂ.ನಷ್ಟು ಹೆಚ್ಚಳ ಕಂಡಿದೆ.ಹೊರ ಮಾರುಕಟ್ಟೆಗೆ ಹೋಲಿಸಿದರೆ ಕ್ಯಾಂಪ್ಕೋದಲ್ಲಿ ಐದು ರೂ. ಕಡಿಮೆ ಇದೆ. ಕ್ಯಾಂಪ್ಕೋ ಮಾರು ಕಟ್ಟೆಯಲ್ಲಿ ಫೆ. 26ರಂದು ಹೊಸ ಅಡಿಕೆಗೆ 325-345 ರೂ., ಸಿಂಗಲ್ ಚೋಲ್ಗೆ 400 ರೂ.ನಿಂದ 410 ರೂ., ಡಬ್ಬಲ್ ಚೋಲ್ 400 ರೂ.ನಿಂದ 425 ರೂ. ತನಕ ಇತ್ತು.

ಮಾ. 12ರಂದು ಹೊಸ ಅಡಿಕೆಗೆ 340-350 ರೂ., ಸಿಂಗಲ್ ಚೋಲ್ಗೆ 418 ರೂ.ನಿಂದ 420 ರೂ., ಡಬ್ಬಲ್ ಚೋಲ್ 430 ರೂ.ನಿಂದ 440 ರೂ. ತನಕ ಇತ್ತು. ಅಡಿಕೆಗೆ ಪ್ರಸ್ತುತ ಬೇಡಿಕೆ ಹೆಚ್ಚುತ್ತಿರುವುದರಿಂದ ಧಾರಣೆ ಇನ್ನಷ್ಟುಏರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.