Sunday, January 19, 2025
ಕುಂದಾಪುರಸುದ್ದಿ

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಇದರ ನೂತನ ದೇವಾಲಯ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ – ಕಹಳೆ ನ್ಯೂಸ್

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಇದರ ನೂತನ ದೇವಾಲಯ ಲೋಕಾರ್ಪಣೆ ಬ್ರಹ್ಮಕಲಶೋತ್ಸವ , ಲಕ್ಷಮಿದಕ ಹವನ, ಶತಚಂಡಿಕ ಯಾಗ, 2016 ಕಾಯಿ ಗಣ ಹವನ ಕಾರ್ಯಕ್ರಮದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಶ್ರೀ ಸುಬ್ರಮಣ್ಯ ಮಠದ ಸ್ವಾಮೀಜಿ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಕರಾವಳಿಯಲ್ಲಿರುವ ಅನೇಕ ಸನ್ನಿಧಾನಗಳು ಭಕ್ತರಿಗೆ ಭಕ್ತಿಯ ಸಿಂಚನ ಮಾಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬದುಕಿನಲ್ಲಿ ಸಂಸ್ಕಾರ, ಸಂಸ್ಕøತಿ ಮುಕ್ಯ. ನಮ್ಮ ಅನೇಕ ಸಿದ್ದಾಂತಗಳು ಆಸ್ತಿಕ ಮನೋಭಾವನೆಗಳನ್ನು ಮೂಡಿಸುತ್ತವೆ. ನಾವು ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಧರ್ಮ ಮಾರ್ಗ ದಿಂದ ನಡೆದರೆ ಮಾತ್ರ ನಮಗೆ ಯಶಸ್ಸು ಸಾಧ್ಯ. ಭಗವಂತನ ಮೇಲೆ ನಮಗೆ ಭಕ್ತಿ ಇದ್ದಾಗ ಮಾತ್ರ ಧರ್ಮ ಮಾರ್ಗದಲ್ಲಿ ನಡೆಯಬಹುದು. ನಾವು ಯಾರ ಕಣ್ಣೂ ತಪ್ಪಿಸುವುದಕ್ಕೆ ಸಾಧ್ಯ ಆದರೆ ಭಗವಂತನ ಕಣ್ಣೂ ತಪ್ಪಿಸಲಗದು. ಧಾರ್ಮಿಕ ಪ್ರಜ್ಞೆಯೊಂದಿಗೆ ನಮ್ಮ ಬದುಕು ಇರಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಾತನಾಡಿದ ದೇವಸ್ಥಾನದ ಧರ್ಮದರ್ಶಿ ವೆ.ಮೂ.ಬಾಲಚಂದ್ರ ಭಟ್ಟ ಹಲವರ ಉಪಕಾರ ಸ್ಮರಿಸಿದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಬಸರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ. ಅಪ್ಪಣ್ಣ ಹೆಗಡೆ ಮಾತನಾಡಿ ನಾವು ಇಂದು ಹಣದ ಹಿಂದೆ ಬಿದ್ದಿರುವುದು ಧಾರ್ಮಿಕ ಶ್ರದ್ಧೆ ಕಡಿಮೆಯಾಗಲು ಕಾರಣವಾಗಿದೆ. ಇಂದು ಸಂಸ್ಕಾರ ಇಲ್ಲದೆ ಇರುವುದರಿಂದ ಕುಟುಂಬದಲ್ಲಿ ಭಿನ್ನ ಭಿನ್ನ ವಾತಾವರಣ ಕಾಣುತ್ತೇವೆ. ಇಂದು ಧರ್ಮ ಪ್ರಜ್ಞೆ ಮೂಡಿಸುವ ಮೂಲಕ ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ .ಓಡಿಸಬೇಕಾಗಿದೆ ಎಂದು ಕರೆ ನೀಡಿದರು.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಮಾತನಾಡಿ ಋಷಿಮುನಿಗಳ ಅನುಗ್ರಹದಿಂದ ನಮಗೆ ಈ ಒಂದು ಧಾರ್ಮಿಕ ಕ್ಷೇತ್ರಗಳು ದೊರಕಿವೆ. ನಾವು ಮಾಡುವ ಉತ್ತಮ ಕಾರ್ಯ, ಧರ್ಮ ಕಾರ್ಯ, ಸತ್ಕಾರ್ಯ ಗಳು ನಮಗೆ ಪರಲೋಕದಲ್ಲಿ ಲಭ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿμÁ್ಟನದ ಅಧ್ಯಕ್ಷ ಎಲ್. ಟಿ. ತಿಮ್ಮಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದ ಅಧ್ಯಕ್ಷ ಡಾ ಕೆ.ಎಸ್.ಕಾರಂತ, ಅತಿಶಯ ಜೈನ ಕ್ಷೇತ್ರದ ಮೊಕ್ತೇಸರ ಸುರೇಂದ್ರ ಜೈನ್, ಲೋಕನಾತೇಶ್ವರ ದೇವಸ್ಥಾನದ ಧರ್ಮದರ್ಶಿ ಸನತ್ ಕುಮಾರ್ ರೈ ಮಾತನಾಡಿದರು.

ವೇದಿಕೆಯಲ್ಲಿ ಉದ್ಯಮಿ ಕರುಣಾಕರ ಶೆಟ್ಟಿ, ಶ್ರೀ ಸಿದ್ದಿ ಶೈಕ್ಷಣಿಕ ಪ್ರತಿμÁ್ಟನದ ಕಾರ್ಯದರ್ಶಿ ಶರಣ ಕುಮಾರ್, ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಸಿದ್ಧಿವಿನಾಯಕ ಶಾಲೆಯ ಉಪ ಪ್ರಾಂಶುಪಾಲ ರಾಮ ದೇವಾಡಿಗ ನಿರ್ವಹಿಸಿದರು. ರಾಧಾಕೃಷ್ಣ ಭಟ್ಟ ಭಟ್ಕಳ ವಂದಿಸಿದರು.