Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕದ್ರಿ ದಕ್ಷಿಣ ವಾರ್ಡಿನಲ್ಲಿ 15ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ ಕಾಮತ್ – ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 33ನೇ ಕದ್ರಿ ದಕ್ಷಿಣ ವಾರ್ಡಿನಲ್ಲಿ 15 ಲಕ್ಷ ರೂ ಅನುದಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಇಲ್ಲಿನ ಸುಮಸದನ ಎದುರಿನ ರಸ್ತೆಗೆ ಅತೀ ಅಗತ್ಯವಾಗಿ ಕಾಂಕ್ರೆಟೀಕರಣವಾಗಬೇಕಿರುವ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರಾದ ಮನೋಹರ್ ಶೆಟ್ಟಿ ಕದ್ರಿ ಹಾಗೂ ಕಾವ್ಯ ನಟರಾಜ್ ಆಳ್ವಾ ರವರು ನನ್ನ ಗಮನಕ್ಕೆ ತಂದಿದ್ದರು. ಆ ನಿಟ್ಟಿನಲ್ಲಿ 15 ಲಕ್ಷ ರೂ ಅನುದಾನದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಯಶವಂತ್ ನಾಯಕ್, ತಾರನಾಥ ಶೆಟ್ಟಿ, ವಸಂತ್, ಶರಣ್ ಕದ್ರಿ, ಸಹಾನ್, ಹೇಮಾನಂದ್, ಸಚಿನ್ ಕದ್ರಿ, ರಾಘವೇಂದ್ರ ಬರುವತ್ತಾಯ, ಶ್ರವಣ್, ನರೇಶ್ ಶೇಟ್, ನಾಗೇಶ್ ದೇವಾಡಿಗ, ಸುರೇಶ್ ದೇವಾಡಿಗ, ದಿನೇಶ್ ದೇವಾಡಿಗ, ಬಂಟಪ್ಪ ರೈ, ರಾಮಕೃಷ್ಣ ರಾವ್, ಸಂಜೀವ ಅಡ್ಯಾರ್, ವೆಂಕಟೇಶ್, ಚಂದ್ರಕಾಂತ್, ಕೇಶವ ಕದ್ರಿ, ಸುಮತಿ ಹೆಗ್ಡೆ, ರವೀಶ್ ರೈ, ಚಂದ್ರಕಾಂತ್, ಸುನಿಲ್ ಶೆಟ್ಟಿ, ಅರ್ಜುನ್ ಶೇಟ್, ಶ್ರೀಧರ್ ಐತಾಳ್, ಅನಿಲ್ ಶೆಟ್ಟಿ, ಹಾಗೂ ಪಾಲಿಕೆ ಇಂಜಿನಿಯರ್ ಗಳಾದ ಜೆರಿಸನ್ ಜಾರ್ಜ್ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು