Sunday, January 19, 2025
ದಕ್ಷಿಣ ಕನ್ನಡಮಂಗಳೂರುರಾಜಕೀಯರಾಜ್ಯಸುದ್ದಿ

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಕಚೇರಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ವಾಗತ ; ಯಾವುದೇ ಹುದ್ದೆಯ ಅಪೇಕ್ಷೆ ಇಲ್ಲ – ಬೇಷರತ್ತಾಗಿ ಬಿಜೆಪಿಗೆ ಬೆಂಬಲ ಎಂದ ಪುತ್ತಿಲ – ಕಹಳೆ ನ್ಯೂಸ್

ಮಂಗಳೂರು : ಬಿಜೆಪಿಗೆ ಬಂಡಾಯವಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಬೇಜರತ್ತಾಗಿ ಇಂದು ಬೆಂಬಲ ಸೂಚಿಸಿದ್ದಾರೆ.

ಪುತ್ತಿಲ ಪರಿವಾರವನ್ನೂ ವಿಸರ್ಜನೆ ಮಾಡಿದ ಬಗ್ಗೆ ಅಧಿಕೃತ ಮೂಲಗಳು ಮಾಹಿತಿ ನೀಡಿದೆ. ಪುತ್ತಿಲ ಬಿಜೆಪಿ ಸೇರ್ಪಡೆ ಬಹುದೊಡ್ಡ ಗೊಂದಲವಾಗಿತ್ತು. ಇದೀಗ ಮಂಗಳೂರಿನಲ್ಲಿ ಯಾವುದೇ ಸ್ಥನಮಾನದ ಬೇಡಿಕೆ ಇಲ್ಲದೆ ಬಿಜೆಪಿ ಕಚೇರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷರು ಬಿಜೆಪಿ ಶಾಲು ಹಾಕಿ ಸ್ವಾಗತಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬಳಿ ಪುತ್ತಿಲ ಮಾತುಕತೆ ನಡೆದಿತ್ತು. ಜೊತೆಗೆ‌ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುತ್ತೂರು ಮಂಡಲ ಅಧ್ಯಕ್ಷರುಗಳಾದ ಪಿ.ಜಿ. ಜಗನ್ನಿವಾಸ್ ರಾವ್ ಹಾಗೂ ಸಾಜ ರಾಧಾಕೃಷ್ಣ ಆಳ್ವ, ಶಾಸಕ ಸುನೀಲ್ ಕುಮಾರ್ ಇದ್ದರು. ಜೊತೆಗೆ ನಿಂತು ಫೊಟೋ ಕ್ಲಿಕ್ಕಿಸಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಎಲ್ಲಾ ಬೆಳವಣಿಗೆ ಬಳಿಕ ಬಿಜೆಪಿಯಲ್ಲಿ ಗೊಂದಲ ಉಂಟಾಗಿತ್ತು. ಇಂದು ಇದೆಲ್ಲದಕ್ಕೂ ತೆರೆ ಬಿದ್ದಿದೆ. ಯಾವುದೇ ಹುದ್ದೆಯ ಅಪೇಕ್ಷೆ ಇಲ್ಲದೆ ಬಿಜೆಪಿ ಜೊತೆ ಕೆಲಸ ಮಾಡುತ್ತೇನೆ ಎಂದು ಸ್ವತಃ ಪುತ್ತಿಲರೇ ಮಾಧ್ಯಮಗಳ ಮುಂದೆ ಹೇಳುವ ಮೂಲಕ ಎಲ್ಲಾ ಗೊಂದಲಕ್ಕು ತೆರೆ ಎಳೆದಿದ್ದಾರೆ.

ಪುತ್ತಿಲ ಜೊತೆ ಕೊನೆಗೂ ಬಿಜೆಪಿ ಶಾಲು ಹಾಕಿಸಿಕೊಂಡು ಪುತ್ತಿಲ ಪರಿವಾರದ ಮುಖವಾಣಿ ಶ್ರೀಕೃಷ್ಣ ಉಪಾಧ್ಯಾಯರು ಬಿಜೆಪಿಗೆ..!!

ಹೌದು. ಇದರ ನಡುವೆ ಪುತ್ತಿಲ ಪರಿವಾರದ ಮುಖವಾಣಿಯಾಗಿ ಎಲ್ಲಾ ವೇದಿಕೆಯಲ್ಲೂ ಭಾಷಣ ಮಾಡುತ್ತಾ ಪುತ್ತಿಲ ಬೆಂಬಲಿಗರಾಗಿದ್ದ ವಾಗ್ಮಿ, ಪುರೋಹಿತ ಶ್ರೀಕೃಷ್ಣ ಉಪಾಧ್ಯಾಯರು ಬಿಜೆಪಿ ಶಾಲು ಹಾಕಿಸಿಕೊಂಡು ಅಧಿಕೃತವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.