Recent Posts

Sunday, January 19, 2025
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಮತದಾನ ನನ್ನ ಹಕ್ಕು’ ಕಾರ್ಯಗಾರ –

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನಲ್ಲಿ ದಿನಾಂಕ 14-03-2024 ರಂದು ‘ಮತದಾನ ನನ್ನ ಹಕ್ಕು’ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ|ವಿಜಯ ಕುಮಾರ್‌ ಎಂ ಮಾತನಾಡಿ “ಮತದಾನ ಪ್ರಜಾಸತ್ತಾತ್ಮಕ ವ್ಯಸಸ್ಥೆಯ ಮಹತ್ವದ ಮೈಲಿಗಲ್ಲು. ಈ ಕಾರ್ಯಗಾರದಲ್ಲಿಭಾಗವಹಿಸುತ್ತಿರವವರು ಬಹುತೇಕ ಪ್ರಥಮಬಾರಿಗೆ ಮತದಾನದಲ್ಲಿ ಭಾಗವಹಿಸುತ್ತಿದ್ದೀರಿ. ಮತದಾನ ಪ್ರತಿಯೋರ್ವ ನಾಗರಿಕನಹಕ್ಕು. ಆದರೆ ಈ ಹಕ್ಕನ್ನು ಜೀವಂತವಾಗಿರಿಸುವಲ್ಲಿ ನಮ್ಮ ಹಿಂದಿನ ತಲೆಮಾರಿನವರು ಬಹಳಷ್ಟು ಹೋರಾಟ ನಡೆಸಿರುತ್ತಾರೆ.


ನಿಮ್ಮಮತವು ನಿಮ್ಮ ಮೌಲ್ಯಗಳು, ಆಶೋತ್ತರಗಳು ಹಾಗೂ ಕನಸುಗಳ ಪ್ರತೀಕವಾಗಿದೆ. ಪ್ರತಿಯೋರ್ವ ಜವಾಬ್ದಾರಿಯುತ ನಾಗರಿಕನೂಮತದಾನದಲ್ಲಿ ಭಾಗವಹಿಸಬೇಕು. ಸುತ್ತುಮುತ್ತಲಿನ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದು ವಿದ್ಯಾವಂತರಾದ ನಮ್ಮನಿಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು. ಮತದಾನದ ಬಗ್ಗೆ ಜಾಗೃತಿಮೂಡಿಸುವ ಸಂದರ್ಭದಲ್ಲಿ ಅವರು ಮತದಾರರಪಟ್ಟಿಯಲ್ಲಿ ಹೆಸರು ನೋದಾಯಿಸುವ ಪ್ರಕ್ರಿಯೆ, ಮತದಾರರ ಗುರುತಿನ ಚೀಟಿಯ ಮಹತ್ವ ಹಾಗೂ ಮತದಾನ ದ ಸಂದರ್ಭದಲ್ಲಿಬಳಸಬಹುದಾದ ಇತರ 21 ಗುರುತು ಪತ್ರಗಳ ಬಗ್ಗೆ, ಇಲೆಕ್ಟ್ರಾನಿಕ್‌ ಮತಯಂತ್ರ ಹಾಗೂ ವಿವಿಪ್ಯಾಟ್‌ ಬಳಕೆಯ ಬಗ್ಗೆ ಮಾಹಿತಿನೀಡಿದರು. ಎನ್‌ ಎಸ್‌ ಎಸ್‌ ಯೋಜನಾಧಿಕಾರಿ ವಾಸುದೇವ ಎನ್‌ ಸ್ವಾಗತಿಸಿ J ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಚುನಾವಣಾ ನೋಡಲ್‌ ಅಧಿಕಾರಿ ಡಾ| ಬಸ್ತ್ಯಾಂ ಪಯಾಸ್‌ ವಂದಿಸಿದರು. ಕಿರಣ್‌ ಮತ್ತು ಪಂಗಡದವರು ಪ್ರಾರ್ಥನೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು