Sunday, January 19, 2025
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಮಂಗಳೂರುಸುದ್ದಿ

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆಯ್ಕೆಯಲ್ಲಿ ಗೊಂದಲ : ದ.ಕ. ಜಿಲ್ಲೆಯ ಮೂರು ದೇವಸ್ಥಾನಗಳ ಆಯ್ಕೆಗೆ ತಾತ್ಕಾಲಿಕ ತಡೆ ನೀಡಿದ ಧಾರ್ಮಿಕ ದತ್ತಿ ಇಲಾಖೆ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮೂರು ದೇವಸ್ಥಾನಗಳಿಗೆ ಆಯ್ಕೆಯಾಗಿದ್ದ ವ್ಯವಸ್ಥಾಪನಾ ಸಮಿತಿಯ ಆಯ್ಕೆಯ ಆದೇಶಕ್ಕೆ ತಾತ್ಕಾಲಿಕವಾದ ತಡೆಯನ್ನು ನೀಡಲಾಗಿದೆ ಎಂದು ಧಾರ್ಮಿಕ ದತ್ತಿ ಆಯುಕ್ತರು ಆದೇಶವನ್ನು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಮಂಗಳೂರಿನ ನಂದನೇಶ್ವರ ದೇವಸ್ಥಾನ ಮತ್ತು ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಯ್ಕೆಗೆ ತಾತ್ಕಾಲಿಕ ತಡೆಯಾಗಿದೆ. ಕಾರಣವನ್ನು ನೀಡಲಾಗಿಲ್ಲ, ಮುಂದಿನ ಆದೇಶದವರೆಗೆ ಈ ತಡೆಯನ್ನು ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಧಾರ್ಮಿಕ ದತ್ತಿ ಇಲಾಖಾ ಸಚಿವರ ಟಿಪ್ಪಣಿ ಮೇಲೆ ಈ ಆದೇಶವನ್ನು ಮಾಡಲಾಗಿದೆ. ದ ಕ ಜಿಲ್ಲೆಯ ಈ ಮೂರು ದೇವಸ್ಥಾನಗಳಿಗೂ ಆಯ್ಕೆ ನಡೆದು ಅಧಿಕಾರ ಹಸ್ತಾಂತರ ಪ್ರಕ್ರಿಯೆಯೂ ನಡೆದಿತ್ತು. ಇದೀಗ ಮತ್ತೆ ಆಡಳಿತಾಧಿಕಾರಿಗೆ ಅಧಿಕಾರ ಹಸ್ತಾಂತರಿಸಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು