Thursday, April 3, 2025
ಸುದ್ದಿ

ಪುತ್ತೂರು – ಉಪ್ಪಿನಂಗಡಿ ರಸ್ತೆ ಬದಿ ನೆಟ್ಟ ಗಿಡಗಳಿಗೆ ನೀರುಣಿಸಿದ ಕೋಡಿಂಬಾಡಿ ಗ್ರಾಮ ಪಂಚಾಯತ್ – ಕಹಳೆ ನ್ಯೂಸ್

ಪುತ್ತೂರು: ಕಳೆದ ಮಳೆಗಾಲದಲ್ಲಿ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೋಡಿಂಬಾಡಿ ಬಳಿ ರಸ್ತೆ ಬದಿಯಲ್ಲಿ ನೆಡಲಾಗಿದ್ದ ಗಿಡಗಳಿಗೆ ನೀರುಣಿಸುವ ಮೂಲಕ ಕೋಡಿಂಬಾಡಿ ಗ್ರಾಪಂ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ.

ಸಾಧಾರಣವಾಗಿ ರಸ್ತೆ ಬದಿಯಲ್ಲಿ ಗಿಡ ನೆಟ್ಟರೆ ಮತ್ತೆ ಅದನ್ನು ಕಣ್ಣೆತ್ತಿ ನೋಡುವವರೇ ಇಲ್ಲ. ಬದುಕಿದರೆ ಬದುಕಿತು , ನೀರಿಲ್ಲದೆ ಸತ್ತರೂ ಆಯಿತು ಎಂಬಂತಿತ್ತು. ಗಿಡಗಳು ಬಿಸಲಿನ ತಾಪಕ್ಕೆ ಬಲಿಯಾಗದಿರಲಿ ಎಂದು ಗ್ರಾಮ ಪಂಚಾಯತ್ ಎಲ್ಲಾ ಗಿಡಗಳಿಗೂ ನೀರು ಹಾಕಿದೆ. ಗ್ರಾಪಂ ಪರಿಸರ ಪ್ರೇಮದ ಬಗ್ಹೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ರೀತಿ ಎಲ್ಲಾ ಕಡೆಗಳಲ್ಲಿ ಮುಂದುವರೆದರೆ ರಸ್ತೆ ಬದಿಯಲ್ಲಿ ಒಂದಷ್ಟು ಗಿಡ,ಮರಗಳು ನೆರಳಿನ ಆಶ್ರಯ ಕೊಡಬಹುದು. ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ಎಸಿಎಫ್ ಸುಬ್ಬ ನಾಯ್ಕ್, ಅರಣ್ಯ ವೀಕ್ಷಕ ಶೀನಪ್ಪ, ಸಿಂದಿ ತೇಜ, ಸ್ಥಳೀಯರಾದ ರತ್ನಾಕರ ಪ್ರಭು,ಹರೀಶ್ ಪ್ರಭು ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ