Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಬೆಂಬಲಿಗರು ದಾಂದಲೆ ನಡೆಸಿದ ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರ ಮನಗೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ; ಘಟನೆ ಕುರಿತು ಆಕ್ರೋಶ – ಕಹಳೆ ನ್ಯೂಸ್

ಪುತ್ತೂರಿನ ಶಾಸಕರಾದ ಅಶೋಕ್ ರೈಯವರಿಂದ ಕ್ಷೇತ್ರಕ್ಕೆ ಬಿಡುಗಡೆಯಾದ 1400 ಕೋಟಿಯ ಅನುದಾನದ ಸತ್ಯಾಸತ್ಯತೆಯ ಬಗ್ಗೆ ಸಾಮಾಜಿಕ ಜಲಾತಾಣದಲ್ಲಿ ಮಾಹಿತಿ ಕೇಳಿದ ಬಿಜೆಪಿಯ ಕಾರ್ಯಕರ್ತ ಜಯಾನಂದ ಕೆ ಬಂಗೇರ ಅವರ ಮನೆಗೆ ಶಾಸಕರ ಬೆಂಬಲಿತ ತಂಡವೊಂದು ನುಗ್ಗಿ ದಾಂದಲೇ ನಡೆಸಿರುವುದು ಖಂಡನೀಯ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಜಯಾನಂದ್ ಬಂಗೇರರ ಮನೆಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ, ಜಗನ್ನಿವಾಸ್ ರಾವ್ ಸಹಿತ ಬಿಜೆಪಿ ನಾಯಕರು ಕಾರ್ಯಕರ್ತನಿಗೆ ದೈರ್ಯ ತುಂಬಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ ಅರುಣ್ ಪುತ್ತಿಲ, ಪ್ರಜಾಪ್ರಭುತ್ವ ಮತ್ತು ಸಂವಿಧಾನವು ನಾಗರೀಕರಿಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಕೊಟ್ಟಿದೆ. ಹಾಗೆಂದು ಗೂಂಡಾವರ್ತನೆ ನಡೆಸುವುದು ಎಷ್ಟು ಸರಿ ..? ಈಗಾಗಲೇ ಇಬ್ಬರ ವಿರುದ್ದ ಕೇಸ್ ದಾಖಲಾಗಿದೆ. ಅದರಲ್ಲಿ ಹಲವು ವ್ಯಕ್ತಿಗಳಿದ್ದರು. ವಿಡಿಯೋ ದಾಖಲೆ ಇದೆ. ಎಲ್ಲರ ವಿರುದ್ದ ಪ್ರಕರಣ ದಾಖಲಾಗಬೇಕು ಎಂದು ಪೋಲೀಸ್ ಅಧಿಕಾರಿಗಳಲ್ಲಿ ಪುತ್ತಿಲ ಒತ್ತಾಯಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು