Friday, September 20, 2024
ಸುದ್ದಿ

ಚೀನಾದ ವಿರುದ್ದ ಕಾರ್ಯತಂತ್ರ ರೂಪಿಸಲು ಭಾರತ, ಜಪಾನ್ ಸಿದ್ದತೆ – ಕಹಳೆ ನ್ಯೂಸ್

ದೆಹಲಿ: ಹಿಂದು ಮಹಾಸಾಗರದಲ್ಲಿ ಅಧಿಪತ್ಯ ಸ್ಥಾಪಿಸಲು ಯತ್ನಿಸುತ್ತಿರುವ ಚೀನಾದ ವಿರುದ್ದ ಕಾರ್ಯತಂತ್ರ ರೂಪಿಸಲು ಭಾರತ ಮತ್ತು ಜಪಾನ್ ಸಿದ್ದವಾಗುತ್ತಿದೆ.

ಹೌದು, ಚೀನಾದ ವಿರುದ್ದ ಕಾರ್ಯತಂತ್ರ ರೂಪಿಸಲು ಮತ್ತು ದೇಶದ ನೌಕಾವ್ಯವಸ್ಥೆ ಬಲಿಪಡಿಸಿ, ರಕ್ಷಣಾ ಸಹಕಾರ ವೃದ್ಧಿಸಲು ಭಾರತ ಮತ್ತು ಜಪಾನ್ ಒಪ್ಪಂದ ಮಾಡಿಕೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಾರದ ಕೊನೆಯ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ ತೆರಳಿ ಅಲ್ಲಿನ ಪ್ರಧಾನಿ ಶಿಂಜೋ ಅಬೆಯವರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ನೌಕಾಪಡೆ ಮತ್ತು ಇತರ ಮಿಲಿಟರಿ ರಕ್ಷಣಾ ಸಹಕಾರ ಕುರಿತು ಮಹತ್ವದ ಒಪ್ಪಂದ ನಡೆಯಲಿದೆ.

ಜಾಹೀರಾತು

ಅಮೆರಿಕ, ಜಪಾನ್ ಜತೆಗೆ ಭಾರತ ಹಿಂದು ಮಹಾಸಾಗರ ಮತ್ತು ಪೆಸಿಫಿಕ್ ಸಾಗರದಲ್ಲಿ ಈಗಾಗಲೇ ನೌಕಾಪಡೆಗಳ ಸಹಕಾರದಲ್ಲಿ ಸಮರಾಭ್ಯಾಸ ನಡೆಸಿದೆ.