Recent Posts

Sunday, January 19, 2025
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಂಗಳೂರು ವಿ ವಿ ಅಂತರ್‌ ಕಾಲೇಜು ಮಹಿಳೆಯರ ಲೆದರ್‌ ಬಾಲ್‌ ಕ್ರಿಕೆಟ್‌ ಪಂದ್ಯಾಟ

ಪುತ್ತೂರು : ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸಂತ ಫಿಲೋಮಿನಾ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳೆಯರಲೆದರ್‌ ಬಾಲ್‌ ಕ್ರಿಕೆಟ್‌ ಪಂದ್ಯಾಟದಲ್ಲಿ ಬ್ರಹ್ಮಾವರದ ಎಸ್‌ ಎಂ ಎಸ್‌ ಕಾಲೇಜಿನ ತಂಡವು ವಿಜಯಿಯಾಗಿ ಹಾಗೂಉಡಬಿದಿರೆಯ ಆಳ್ವಾಸ್‌ಕಾಲೇಜಿನ ಕ್ರಿಕೆಟ್‌ ತಂಡವು ದ್ವಿತೀಯಸ್ಥಾನಿಯಾಗಿ ಹೊರಹೊಮ್ಮಿತು. ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನ ತಂಡ ಹಾಗೂ ಯುನಿವರ್ಸಿಟಿಕಾಲೇಜು ತಂಡ ಕ್ರಮವಾಗಿ ತೃತೀಯಸ್ಥಾನ ಮತ್ತು ಚತುರ್ಥ ಸ್ಥಾನಗಳನ್ನು ಪಡೆದುಕೊಂಡವು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಯಂಕಾಲ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರಿನ ಹಿರಿಯ ನ್ಯಾಯವಾದಿ ಹಾಗೂ ಮಾಜಿ ಕ್ರಿಕೆಟ್‌ಆಟಗಾರ ನರಸಿಂಹ ಪ್ರಸಾದ್‌ ಮಾತನಾಡಿ “ಕ್ರೀಡಾ ಪ್ರತಿಭೆಗಳು ಎಳವೆಯಿಂದಲೇ ಉತ್ತಮ ತರಬೇತಿ ಹಾಗೂ ಶಿಸ್ತನ್ನು ಮೈಗೂಡಿಸಿಕೊಂಡುಅಭ್ಯಾಸಮಾಡಿದ ಮಾತ್ರವೇ ಯಶಸ್ಸು ಸಾಧ್ಯ” ಎಂದು ಹೇಳಿದರು. ಕಾರ್ಯಕ್ರಮದ ಇನ್ನೋರ್ವ ಅಭ್ಯಾಗತರಾತ ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ| ಜೆರಾಲ್ಡ್‌ ಸಂತೋಷ್‌ ಡಿಸೋಜರವರು “ಕ್ರಿಕೆಟ್‌ ಪಟುಗಳು ದೈಹಿಕ ಕ್ಷಮತೆ, ಚಾಕಚಕ್ಯತೆ ಹಾಗೂಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಂಡಲ್ಲಿ ಯಶಸ್ಸು ನಿಶ್ಚಿತ. ಮಹಿಳಾ ಕ್ರೀಡಾಪಟುಗಳು ಕೇವಲ ಅಂತರ್‌ ಕಾಲೇಜು ಅಥವಾ ಅಂತರ್‌ ವಿಶ್ವ
ವಿದ್ಯಾನಿಲಯ ಮಟ್ಟದ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಿದರೆ ಸಾಲದು. ತಮ್ಮ ಕನಸುಗಳನ್ನು ವಿಸ್ತರಿಸಿ ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಭಾಗವಹಿಸಿಉತ್ತಮ ಭವಿಷ್ಯವನ್ನು ತಮ್ಮದಾಗಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆಧ್ಯಕ್ಷತೆಯನ್ನುವಹಿಸಿದ್ದ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕರಾದ ವಂ| ಸ್ಟ್ಯಾನಿ ಪಿಂಟೋರವರು “ಯಾವುದೇ ಕ್ರೀಡೆ ಇರಲಿ ಕ್ರೀಡಾ ಪಟುಗಳು ಮಾನಸಿಕವಾಗಿ ಹಾಗೂದೈಹಿಕವಾಗಿ ಸುದೃಢರಾಗಿರಬೇಕು. ಮಂಗಳೂರು ವಿಶ್ವ ವಿದ್ಯಾನಿಲಯವು ಈ ಕ್ರಿಕೆಟ್‌ ಸ್ಪರ್ಧೆಯನ್ನು ಏರ್ಪಡಿಸುವ ಮುಖಾಂತರ ಕ್ರೀಡಾಪಟುಗಳಿಗೆಉತ್ತಮ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಕ್ರೀಡಾಪಟುಗಳು ಕಠಿಣ ಪರಿಶ್ರಮದೊಂದಿಗೆ ಯಶಸ್ಸಿನತ್ತ ಸಾಗಲು ಮುಂದಡಿಯಿಡಬೇಕು” ಎಂದು
ಹೇಳಿದರು.ಪುತ್ತೂರಿಗೆ ಶಿಘ್ರದಲ್ಲಿಯೇ ಸುಸಜ್ಜಿತ ಕ್ರೀಡಾಂಗಣ: “ಕ್ರಿಕೆಟ್‌ ಅಂದರೆ ಬಹಳ ಜನಪ್ರಿಯ ಆಟವಾಗಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಐಪಿಎಲ್‌ ಮಾದರಿಯಕ್ರಿಕೆಟ್‌ ಪಂದ್ಯಾವಳಿಗಳಲ್ಲಿ ಮಿಂಚಲು ಸಾಕಷ್ಟು ಅವಕಾಶಗಳಿವೆ. ಕ್ರೀಡಾಪಟುವಾಗಿ ಯಶಸ್ಸುಗಳಿಸಬೇಕಾದಲ್ಲಿ ಕಠಿಣ ಪರಿಶ್ರಮ ಮತ್ತುಬದ್ಧತೆಯನ್ನು ಮೈಗೂಡಿಸಿಕೊಳ್ಳಬೇಕು. ಕ್ರಿಕೆಟ್‌ ಪಟುಗಳ ಕ್ರೀಡಾ ಸಾಧನೆಗೆ ಪೂರಕವಾಗುವಂತೆ ಪುತ್ತೂರಿನಲ್ಲಿ ಶೀಘ್ರದಲ್ಲಿಯೇ ಸುಸಜ್ಜಿದ ಕ್ರಿಕೆಟ್‌ಮೈದಾನದ ಸ್ಥಾಪನೆಯಾಗಲಿದ್ದು ಅದಕ್ಕಾಗಿ ಸುಮಾರು 24 ಎಕರೆಗಳಷ್ಟು ಜಾಗವನ್ನು ಈಗಾಗಲೇ ಕಾದಿರಿಸಲಾಗಿದೆ. ಮುಂಬರುವ ದಿನಗಳಲ್ಲಿ ಕೆಎಸ್‌ ಇ ಎ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ” ಎಂದು ಪುತ್ತೂರು ಕ್ರಿಕೆಟರ್ಸ್‌ ಯೂನಿಯನ್‌ ನ ಕಾರ್ಯದರ್ಶಿ ವಿಶ್ವನಾಥ ನಾಯಕ್‌
ಹೇಳಿದರು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ} ವಿಜಯ ಕುಮಾರ್‌ ಎಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ ಫಿಲೋಮಿನಾ ಪದವಿ ಕಾಲೇಜಿನದೈಹಿಕ ಶಿಕ್ಷಣ ನಿರ್ದೇಶಕ ಡಾ| ಎಲ್ಯಾಸ್‌ ಪಿಂಟೋ ಬಹುಮಾನ ವಿಜೇತರ ಹೆಸರನ್ನು ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರುವಿಶ್ವವಿದ್ಯಾನಿಲಯದ ವೀಕ್ಷಕರಾದ ಡಾ| ರಮೇಶ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣನಿರ್ದೇಶಕರಾದ ರಾಜೇಶ್‌ ಮೂಲ್ಯ ಸಹಕಾರ ನೀಡಿದರು.

ಪಂದ್ಯಾಕೂಟದ ಸರ್ವಾಂಗೀಣ ಆಟಗಾರ್ತಿಯಾಗಿ ಬ್ರಹ್ಮಾವರ ಎಸ್‌ ಎಂ ಎಸ್‌ ಕಾಲೇಜಿನ ಲಕ್ಷ್ಮೀ, ಉತ್ತಮ ಬ್ಯಾಟರ್‌ ಆಗಿ ಬ್ರಹ್ಮಾವರ ಎಸ್‌ ಎಂಎಸ್‌ ಕಾಲೇಜಿನ ಸ್ವರ್ಣ ಗೌರಿ ಹಾಗೂ ಉತ್ತಮ ಬೌಲರ್‌ ಆಗಿ ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಸ್ನೇಹ ಪ್ರಶಸ್ತಿ ಪಡೆದುಕೊಂಡರು.