Recent Posts

Sunday, January 19, 2025
ಸುದ್ದಿ

ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆ ; ಬಂಟ್ವಾಳ ನಗರ ಪೋಲೀಸರ ಪಥಸಂಚಲನ –ಕಹಳೆ ನ್ಯೂಸ್

ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಪಾರದರ್ಶಕತೆಯ ಚುನಾವಣೆ ನಡೆಸುವ ಉದ್ದೇಶದಿಂದ ಬಂಟ್ವಾಳ ನಗರ ಪೋಲೀಸರು ಹಾಗೂ ಕೇಂದ್ರ ಮೀಸಲು ಪಡೆ ಪೋಲೀಸರಿಂದ ಪೇಟೆಯಲ್ಲಿ ಪಥಸಂಚಲನ ನಡೆಯಿತು.


ಬಿಸಿರೋಡಿನ ಕೋರ್ಟ್ ಮುಂಭಾಗದಿAದ ಹೊರಟ ಪೋಲೀಸ್ ಪಥಸಂಚಲನ ಕೈಕಂಬ ರಾಷ್ಟ್ರೀಯ ಮೂಲಕ ಮತ್ತೆ ಬಿಸಿರೋಡಿನ ನಾರಾಯಣ ಗುರುವೃತ್ತದಿಂದ ತಾಲೂಕು ಮಿನಿವಿಧಾನಸೌಧದ ಮುಂಭಾಗದಲ್ಲಿ ಸಮಾಪ್ತಿಗೊಂಡಿತು.ಈ ಸಂದರ್ಭದಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯಪ್ರಸಾದ್, ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ,ನಗರ ಪೋಲೀಸ್ ಠಾಣಾ ಎಸ್.ಐ. ರಾಮಕೃಷ್ಣ,ಮೆಲ್ಕಾರ್ ಟ್ರಾಫಿಕ್ ಎಸ್.ಐ. ಸುತೇಶ್, ಸಿ.ಆರ್.ಪಿ.ಎಫ್.ತಂಡದ ಇನ್ಸ್ ಪೆಕ್ಟರ್ ಅಜಯ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು