Sunday, November 24, 2024
ಬಂಟ್ವಾಳಸುದ್ದಿ

ಪಾಂಡವರ ಕಲ್ಲು ಗರೋಡಿ ಜಾತ್ರೆ ; 24ರಂದು ಶ್ರೀ ಬ್ರಹ್ಮಬೈದೆರೆ ಜಾತ್ರೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದೆರೆ ಗರೋಡಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ದೈವಸ್ಥಾನದಲ್ಲಿ “ಶ್ರೀ ಧರ್ಮದೈವ ವಿಷ್ಣುಮೂರ್ತಿ ಪ್ರತಿಷ್ಠಾ ಮಹೋತ್ಸವ” 21ರ ಗುರುವಾರ ನಡೆಯಲಿದ್ದು, ರಾತ್ರಿ ಕಜೆಕಾರು ಗುತ್ತಿನಿಂದ ರಾಜನ್ ದೈವ ಕೊಡಮಣಿತ್ತಾಯ ಮತ್ತು ಪಟ್ರಾಡಿ ತಾವಿನಿಂದ ಶ್ರೀ ಬ್ರಹ್ಮಬೈದರೆ ಭಂಡಾರ ಬಂದು ಬಲಿ ಉತ್ಸವ ನಡೆಯಲಿದೆ.


ದಿ22 ಶುಕ್ರವಾರ ಧ್ವಜಾರೋಹಣ ಹಾಗೂ ಕಂರ್ಬಡ್ಕ ಗುತ್ತಿನಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಬರುವುದು. ಹಾಗೂ ಬೆಳಿಗ್ಗೆ “ಧರ್ಮದೈವ ಶ್ರೀ ವಿಷ್ಣುಮೂರ್ತಿ ಪ್ರತಿಷ್ಠೆ ಮತ್ತು “ಕ್ಷೇತ್ರದಲ್ಲಿ ಎಲ್ಲಾ ದೈವಗಳಿಗೂ ಸಾನ್ನಿಧ್ಯ ಕಲಶಾಭಿಷೇಕ” ಹಾಗೂ ಕೊಡಿಮರ ತೈಲಾಧಿವಾಸ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ಹಾಗೂ ರಾತ್ರಿ ಧರ್ಮದೈವ ಶ್ರೀ ವಿಷ್ಣುಮೂರ್ತಿ ದೈವದ ನೇಮೋತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ 23ರ ರಾತ್ರಿ ಶ್ರೀ ರಾಜನ್ ದೈವಕೊಡಮಣಿತ್ತಾಯ ಮತ್ತು ಕಲ್ಕುಡ ದೈವದ ನೇಮೋತ್ಸವ. 24ರಂದು ಆದಿತ್ಯವಾರ ಮುಂಜಾನೆ 5 ಗಂಟೆಗೆ ಪಿಲಿಚಾಮುಂಡಿ ನೇಮೋತ್ಸವ ರಾತ್ರಿ ಶ್ರೀ ಬ್ರಹ್ಮಬೈದೆರೆ ಜಾತ್ರೋತ್ಸವ ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಗರೋಡಿ ಫ್ರೆಂಡ್ಸ್ ಪಾಂಡವರಕಲ್ಲು ಇವರ ಪ್ರಾಯೋಜಕತ್ವದಲ್ಲಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರವರ ವತಿಯಿಂದ ವಿವಿಧ ಕಾರ್ಯಕ್ರಮಗಳು ಮತ್ತು ಸುಡುಮದ್ದು ಪ್ರದರ್ಶನ ನಡೆದ ಬಳಿಕ ಮಹಾಅನ್ನಸಂತರ್ಪಣೆ ಜರುಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು