Sunday, November 24, 2024
ಸುದ್ದಿ

ಬೆನಕ ಹೆಲ್ತ್ ಸೆಂಟರ್ ಉಜಿರೆಯಲ್ಲಿ ಯಶಸ್ವಿನಿ ಯೋಜನೆಯಲ್ಲಿ ಯಶಸ್ಸಿ ಮೂಣಕಾಲಿನ ಬದಲಿ ಶಸ್ತ್ರ ಚಿಕಿತ್ಸೆ – ಕಹಳೆ ನ್ಯೂಸ್

ರೈತರೇ ಹೆಚ್ಚಾಗಿರುವ ಸಹಕಾರಿ ಸಂಘದ ಸದಸ್ಯರುಗಳಿಗೆ ಸರಕಾರ ನೀಡಿರುವ ಯೋಜನೆಯಲ್ಲಿ ಇದೀಗ ಗ್ರಾಮೀಣ ಪ್ರದೇಶದಲ್ಲಿರುವ ಬೆನಕ ಹೆಲ್ತ್ ಸೆಂಟರ್ ಉಜಿರೆಯಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೊನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಎನ್.ಸಿ ಜಯರಾಮ್ ಯಶಸ್ವಿನಿ ಯೋಜನೆಯ ಫಲಾನುಭವಿಗಳಾಗಿದ್ದು ಇವರಿಗೆ ದಿನಾಂಕ 14-03-2024ರಂದು ಬಲಕಾಳಿನ ಮೊಣಗಂಟು ಬದಲಿ ಶಸ್ತç ಚಿಕಿಸ್ಸೆಯು ಯಶಸ್ವಿನಿ ಯೋಜನೆಯಡಿಯಲ್ಲಿ ಆಗಿದ್ದು ಮಂಗಳೂರಿನ ಖ್ಯಾತ ಮೂಳೆ ತಜ್ಞರಾದ ಡಾ.ವಿಕ್ರಂ ಶೆಟ್ಟ್ಟಿ ಬೆನಕ ಆಸ್ಪತ್ರೆಯ ಎಲುಬು ಮತ್ತು ಮೂಳೆ ತಜ್ಞರಾದ ಡಾ. ರಜತ್, ವೈದ್ಯಕೀಯ ನಿರ್ದೇಶಕರಾದ ಡಾ ಗೋಪಾಲಕೃಷ್ಣರನ್ನು ಒಳಗೊಂಡ ತಂಡ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿಸಿದರು ಈಗ ರೋಗಿಯು ಉತ್ತಮವಾಗಿ ನಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯಶಸ್ವಿನಿ ಯೋಜನೆಯು ಗ್ರಾಮೀಣ ರೈತರಿಗೆ ವರದಾನವಾಗಿದೆ. ಅತ್ಯಂತ ಕ್ಲಿಷ್ಟ ಹಾಗೂ ಪಟ್ಟಣ ಪ್ರದೇಶದಲ್ಲಿ ನಡೆಸುವ ಈ ಶಸ್ತ್ರ ಚಿಕಿತ್ಸೆಯು ಇದೀಗ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ನಡೆದಿದ್ದು ಹೆಮ್ಮೆಯ ವಿಷಯ ಎಂದು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಇವರು ಪತ್ರಿಕಾ ಮಾದ್ಯಮಕ್ಕೆ ತಿಳಿಸಿದರು.