Sunday, November 24, 2024
ಸುದ್ದಿ

ಮಂಗಳೂರು ವಿಶ್ವವಿದ್ಯಾನಿಯ ಮಟ್ಟದ ಸ್ಪರ್ಧೆಗಳಲ್ಲಿ ಸಂತ ಫಿಲೋಮಿನಾ ಕಾಲೇಜಿನ ವೇಟ್‌ ಲಿಫ್ಟಿಂಗ್‌ ತಂಡದ ಸಾಧನೆ

ಪುತ್ತೂರು: ಸಂತ ಫಿಲೋಮಿನಾಕಾಲೇಜಿನ ವೇಟ್‌ ಲಿಫ್ಟಿಂಗ್‌ ಕ್ರೀಡಾಪಟುಗಳು ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಗಳಲ್ಲಿಉತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ಪಡೆಯುವುದರ ಮೂಲಕ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ಇತ್ತೀಚೆಗೆಮಂಗಳೂರಿನ ಎಸ್‌ ಡಿ ಎಂ ಕಾಲೇಜ್‌ ಆಫ್‌ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಯಮಟ್ಟದ 2023-24 ನೇ ಸಾಲಿನ ಪುರುಷರ ವಿಭಾಗದ ಪ್ರೊ| ರಿಚರ್ಡ್‌ ರೆಬೆಲ್ಲೊ ರೋಲಿಂಗ್‌ ಟ್ರೋಫಿ ಹಾಗೂ ಮಹಿಳೆಯರವಿಭಾಗದ ಶಿರ್ವ ಬ್ಲಾಸಮ್ ಮ್ಯಾನ್ಷನ್ ಸೆಲೆಸ್ಟಿನ್ ಡಿಸೋಜಾ ಟ್ರೋಫಿಯಲ್ಲಿ ಸಂತ ಫಿಲೋಮಿನಾದ ಕ್ರೀಡಾಪಟುಗಳ ಸಾಧನೆ
ಗಮನಾರ್ಹವಾದುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಥಮ ಬಿಎಸ್ಸಿಯ ಸ್ಪಂದನಾ ಮಹಿಳೆಯರ 45 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಚಿನ್ನದಪದಕವನ್ನು ಗೆದ್ದುಕೊಂಡರು ಹಾಗೂ ಹೊಸ ಕೂಟ ದಾಖಲೆಯನ್ನು ಸ್ಥಾಪಿಸಿದರು. ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಿಎಸ್ಸಿತರಗತಿಯ ಚೈತ್ರಿಕಾ ಕಂಚಿನ ಪದಕ, 64 ಕೆ.ಜಿ ವಿಭಾಗದಲ್ಲಿ ಪ್ರಥಮ ಎಂ ಕಾಂ ನ ಬ್ಯೂಲಾ ಪಿ ಟಿ ಚಿನ್ನದ ಪದಕ ಗೆಲ್ಲುವಮೂಲಕ ಉತ್ತಮ ಸಾಧನೆ ಮಾಡಿರುತ್ತಾರೆ. ಪುರುಷರ 67 ಕೆಜಿ ವಿಭಾಗದಲ್ಲಿ ತೃತೀಯ ಬಿಕಾಂನ ಮಹಮ್ಮದ್‌ ಮುನಾಫ್‌ಬೆಳ್ಳಿಯ ಪದಕ ಗಳಿಸಿದರೆ 55 ಕೆಜಿ ವಿಭಾಗದಲ್ಲಿ ದ್ವಿತೀಯ ಬಿಬಿಎಯ ಸುರಕ್ಷಿತ್‌ ಕಂಚಿನ ಪದಕ ತಮ್ಮದಾಗಿಸಿದರು.ಪವರ್‌ಲಿಫ್ಟಿಂಗ್‌ನ 81 ಕೆಜಿ ವಿಭಾಗದಲ್ಲಿ ದ್ವಿತೀಯ ಬಿಕಾಂನ ಶಬರೀಶ್ ರೈ ಮತ್ತು 89 ಕಜಿ ವಿಭಾಗದಲ್ಲಿ ದ್ವಿತೀಯಬಿಕಾಂ ನ ಅಭಿರಾಮಚಂದ್ರ ಚಿನ್ನದ ಪದಕಗಳನ್ನು, ಪಡೆಯುವುದರ ಮೂಲಕ ಗಮನಾರ್ಹವಾದ ಸಾಧನೆಯನ್ನು ಮಾಡಿರುತ್ತಾರೆ.

ದ್ವಿತೀಯ ಬಿಕಾಂನ ಯತೀಶ್ ಮತ್ತು 109 ಕೆಜಿ ವಿಭಾಗದಲ್ಲಿ ಪ್ರಥಮ ಬಿ ಎ ಯ ರಂಜಿತ್ ಬೆಳ್ಳಿ ಪದಕಗಳನ್ನು ಗಳಿಸುವಮೂಲಕ, ಗಮನಾರ್ಹ ಸಾಧನೆ ಮಾಡಿರುತ್ತಾರೆ. ಸ್ಪಂದನಾ ಅವರು ಉತ್ತಮ ಪ್ರದರ್ಶನನೀಡಿ ಮಹಿಳಾ ಸ್ಪರ್ಧೆಯಲ್ಲಿ ಬೆಸ್ಟ್ಲಿಫ್ಟರ್ ಎಂಬ ಬಿರುದನ್ನುಗಳಿಸಿರುತ್ತಾರೆ. ಮಹಿಳೆಯರ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ತಂಡವು 30 ಅಂಕಗಳನ್ನು ಗಳಿಸುವಮೂಲಕ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 3 ನೇ ಸ್ಥಾನವನ್ನು ಗಳಿಸಿತು. ಹಾಗೂ ಪುರುಷರ ತಂಡವು ವೇಟ್‌ಲಿಫ್ಟಿಂಗ್‌ನಲ್ಲಿ40 ಅಂಕಗಳನ್ನು ಸಂಗ್ರಹಿಸುವ ಮೂಲಕ ಒಟ್ಟಾರೆಯಾಗಿ 3 ನೇ ಸ್ಥಾನವನ್ನು ಪಡೆಯಿತು.

“ವಿಶ್ವವಿದ್ಯಾನಿಲಯಮಟ್ಟದ ಸ್ಪರ್ಧೆಗಳಲ್ಲಿ ತೀವ್ರ ಪೈಪೋಟಿಯಿದ್ದು ನಮ್ಮ ವಿದ್ಯಾರ್ಥಿಗಳು ಪದಕಗಳನ್ನು ಗೆಲ್ಲುವ ಮೂಲಕಹಾಗೂ ಅಪ್ರತಿಮ ಸಾಧನೆ ಪ್ರದರ್ಶಿಸಿರುತ್ತಾರೆ. ವಿವಿಧ ವಿಭಾಗಗಳಲ್ಲಿ ನಮ್ಮ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ನಿಜಕ್ಕೂಶ್ಲಾಘನೀಯ. ಇವರಿಗೆ ಮಾರ್ಗದರ್ಶನ ನೀಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಎಲಿಯಾಸ್ ಪಿಂಟೋ, ತರಬೇತುದಾರಶ್ರೀ ಪುಷ್ಪರಾಜ್ ಅವರ ಶ್ರಮ ಪ್ರಶಂಸನೀಯ. ಇವರ ಮಾರ್ಗದರ್ಶನದಲ್ಲಿ ನಮ್ಮ ಕಾಲೇಜಿನ ಕ್ರೀಡಾಪಟುಗಳು ಇನ್ನಷ್ಟು ಸಾಧನೆಮಾಡುವಂತಾಗಲಿ” ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೊನಿ ಪ್ರಕಾಶ್‌ ಮೋತೆರೋ ಹೇಳಿದ್ದಾರೆ. ಪ್ರಶಸ್ತಿವಿಜೇತ ವೇಟ್‌ ಲಿಫ್ಟಿಂಗ್‌ ತಂಡವನ್ನು ಕಾಲೇಜಿನ ಸಂಚಾಲಕರಾದ ಅತಿ ವಂ| ಲಾರೆನ್ಸ್‌ ಮಸ್ಕರೇನಸ್‌, ಕ್ಯಾಂಸ್‌
ನಿರ್ದೇಶಕರಾದ ವಂ| ಸ್ಟ್ಯಾನಿ ಪಿಂಟೋ, ಹಾಗೂ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿರುತ್ತಾರೆ.