Friday, September 20, 2024
ಸುದ್ದಿ

ಪ್ರೊ ಕಬಡ್ಡಿ 2ನೇ ಇಂಟರ್ ಝೋನ್ ಪಂದ್ಯದಲ್ಲಿ ಯು ಮುಂಬಾ ತಂಡ ಗೆಲುವು – ಕಹಳೆ ನ್ಯೂಸ್

ಪುಣೆ: ಶ್ರೀ ಛತ್ರಪತಿ ಕ್ರೀಡಾಗ್ರಾಮದಲ್ಲಿ ನಡೆದ ಪ್ರೊ ಕಬಡ್ಡಿ 2ನೇ ಇಂಟರ್ ಝೋನ್ ಪಂದ್ಯದಲ್ಲಿತೆಲುಗು ಟೈಟಾನ್ಸ್ ವಿರುದ್ಧ ಬಲಿಷ್ಟ ಯು ಮುಂಬಾ ತಂಡ 41-20ರ ಗೆಲುವು ಸಾಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಟೂರ್ನಿಯಲ್ಲಿ ಮುಂಬೈಯ ನಾಲ್ಕನೇ ಗೆಲುವು ಆಗಿದೆ.ಪಂದ್ಯದ ಆರಂಭದಿಂದಲೂ ಮುನ್ನಡೆ ಕಾದಿರಿಸಿಕೊಂಡ ಮುಂಬೈ, ಟೈಟಾನ್ಸ್ಗೆ ಸೋಲುಣಿಸಿತು. ಯು ಮುಂಬಾ ಪರ ಸಿದ್ಧಾರ್ಥ್ ದೇಸಾಯ್ ಆಕರ್ಷಕ ಆಟವಾಡಿದರು. ರೈಡಿಂಗ್‌ನಲ್ಲಿ ಮಿಂಚಿದ ಸಿದ್ಧಾರ್ಥ್ ಒಟ್ಟು 14 ಪಾಯಿಂಟ್‌ಗಳನ್ನು ತಂಡಕ್ಕೆ ಸೇರಿಸಿದರು.

ಜಾಹೀರಾತು

ಟೈಟಾನ್ಸ್ನ ರಾಹುಲ್ ಚೌಧರಿ 700 ಪಾಯಿಂಟ್ಸ್ಗಳನ್ನು ಗಳಿಸಿದ ಸಾಧನೆ ಮೆರೆದರು. ಈ ಪಂದ್ಯದ ಬಳಿಕ ಮುಂಬೈ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು, ಒಂದು ಸೋಲು ಮತ್ತೊಂದು ಪಂದ್ಯ ಟೈ ಮಾಡಿಕೊಂಡಿದೆ. ಟೈಟಾನ್ಸ್ 5ರಲ್ಲಿ ಮೂರು ಪಂದ್ಯ ಗೆದ್ದಂತಾಗಿದೆ.