Tuesday, January 21, 2025
ಸುದ್ದಿ

ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿಗೆ ಯಕ್ಷಪ್ರತಿಭೆ ಅನ್ವೇಷ್ ಆರ್.ಶೆಟ್ಟಿ ಆಯ್ಕೆ – ಕಳೆ ನ್ಯೂಸ್

ಬಂಟ್ವಾಳ: ಕರಾವಳಿ ಕರ್ನಾಟಕದ ಗಂಡು ಕಲೆಯೆಂದೇ ಖ್ಯಾತವಾದ ಯಕ್ಷಗಾನ ಅದ್ಭುತವಾದ ವಿಶಿಷ್ಟ ಕಲೆ. ಬಹು ಕಲಾವಿಶೇಷತೆಯನ್ನು ಹೊಂದಿದ ಈ ಕಲಾಪ್ರಾಕಾರವನ್ನು ಕರಗತಗೊಳಿಸುವುದು ಸುಲಭ ಸಾಧ್ಯವಲ್ಲ. ನಿರಂತರ ಆಸಕ್ತಿ, ಅಧ್ಯಯನ, ತೊಡಗಿಸಿಕೊಳ್ಳುವುದರಿಂದ ಮಾತ್ರ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ.


ಯಕ್ಷರಂಗದಲ್ಲಿ ಬಹುಮುಖ ಪ್ರತಿಭೆಯ ಅನೇಕ ಕಲಾವಿದರು ನಮಗೆ ಕಾಣಸಿಗುತ್ತಾರೆ. ಆದರೆ ಉನ್ನತ ಶಿಕ್ಷಣ ಪಡೆಯುತ್ತಿರುವಾಗಲೇ ಅದರಲ್ಲೂ ತಾಂತ್ರಿಕ ಪದವಿ (ಇಂಜಿನೀಯರಿoಗ್) ಶಿಕ್ಷಣದ ಜತೆ ಕಲೋಪಾಸನೆಯಲ್ಲಿ ತೊಡಗಿಸಿಕೊಂಡಿರುವ ಕೆಲವೇ ಮಂದಿ ವಿದ್ಯಾರ್ಥಿಗಳಲ್ಲಿ ಅನ್ವೇಷ್ ಆರ್.ಶೆಟ್ಟಿ ಓರ್ವರು.
ಯಕ್ಷಗಾನ ರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ವಿದ್ಯಾರ್ಥಿ ಯಕ್ಷಸಾಧಕ ಅನ್ವೇಷ್. ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ತನ್ನನ್ನು ಗುರುತಿಸಿಕೊಂಡು ಯಶಸ್ಸು ಪಡೆಯುತ್ತಿರುವುದು ಇವರ ಸಾಧನೆಯಾಗಿದೆ. ಮೂಲತ: ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ನಿವಾಸಿ ಪತ್ರಕರ್ತ, ಕಲಾವಿದ ರತ್ನದೇವ್ ಶೆಟ್ಟಿ ಮತ್ತು ಶಿಕ್ಷಕಿ ಸುಜಾತಾ ದಂಪತಿಯ ಪುತ್ರ ಅನ್ವೇಷ್ ಎಳೆಯ ವಯಸ್ಸಿನಿಂದಲೆ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದರು. ಎಲ್ಲೆಲ್ಲೋ ತಿರುಗಿ ಯಕ್ಷಗಾನದ ಕುಣಿತ ಅಭ್ಯಸಿಸಿ ಹತ್ತಾರು ವೇದಿಕೆಗಳಲ್ಲಿ ತನ್ನ ಪ್ರತಿಭೆ ತೋರ್ಪಡಿಸಿದ್ದರು. ತನ್ನ ಏಳನೇ ವರ್ಷದಲ್ಲಿ ಬಣ್ಣ ಹಚ್ಚಿದ ಇವರು ಬಾಲಕಲಾವಿದನಾಗಿ ಬಳಿಕ ಹಿರಿಯ ಕಲಾವಿದರೊಂದಿಗೆ ಪಾತ್ರ ನಿರ್ವಹಿಸುವ ಅವಕಾಶ ಪಡೆದಿದ್ದರು. ಪ್ರಸ್ತುತ ಇಪ್ಪತ್ತೊಂದು ವರ್ಷಕ್ಕೆ ಕಾಲಿರಿಸಿದ ಇವರು ನೂರಾರು ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಾ ಕುಟುಂಬದ ಕುಡಿಯಾಗಿರುವ ಅನ್ವೇಷ್‌ಗೆ ಕಲೆ ರಕ್ತಗತವಾಗಿ ಬಂದಿದೆ. ಚಿತ್ರಬ್ರಹ್ಮನೆಂದೇ ಖ್ಯಾತಿಗಳಿಸಿದ ಮೇರು ಕಲಾವಿದ ಮುತ್ತಾತ ವಿಟ್ಲ ಬಾಬು ಮಾಸ್ಟರ್ ಅವರ ಸೀನು ಸೀನರಿಯ ಯಕ್ಷಗಾನ ಪ್ರಖ್ಯಾತಿ ಪಡೆದಿದೆ. ಅರುವತ್ತು ವರ್ಷಗಳ ಬಳಿಕ ಮಂಗಳೂರಿನಲ್ಲಿ ಮತ್ತೆ ಸೀನು ಸೀನರಿಯ ಯಕ್ಷಗಾನ ಆರಂಭವಾದಾಗ ಅದರಲ್ಲಿ ಪಾತ್ರ ನಿರ್ವಹಿಸಲು ಅವಕಾಶ ದೊರಕಿದ್ದು ಯೋಗಾಯೋಗಾವೇ ಸರಿ.

ಜಾಹೀರಾತು
ಜಾಹೀರಾತು
ಜಾಹೀರಾತು