Tuesday, January 21, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಕೊಯ್ಯೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರಿಂದ ದಾಳಿ-ಕಹಳೆ ನ್ಯೂಸ್

ಕೊಯ್ಯೂರು : ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ ಘಟನೆ ಕೊಯ್ಯೂರು ಗ್ರಾಮದ ನೆಕ್ಕಿಲು ಎಂಬಲ್ಲಿ ಮಾ.21 ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಯ್ಯೂರು ಗ್ರಾಮದ ನೆಕ್ಕಿಲ್ ಬೆಳಾಲು ಅನಂತೋಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವ ಮಣ್ಣು ರಸ್ತೆಯ ಬದಿ, ಸಾರ್ವಜನಿಕ ಸ್ಥಳದಲ್ಲಿ, ಬೇರೆ ಬೇರೆ ವೈನ್ ಶಾಪ್ ಗಳಿಂದ ವಿಸ್ಕಿ ಸ್ಯಾಚೆಟ್ ಗಳನ್ನು ಖರೀದಿಸಿ ಹೆಚ್ಚು ಹಣಕ್ಕೆ ಮಾರಾಟಕ್ಕೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊAಡಿದ್ದ, ಕೊಯ್ಯೂರು ನಿವಾಸಿ ವಸಂತ (42) ಎಂಬಾತನನ್ನು ವಶಕ್ಕೆ ಪಡೆದ, ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಮುರುಳೀಧರ ನಾಯ್ಕರವರು ಹಾಗೂ ಸಿಬ್ಬಂದಿಗಳು, ಆತನ ಬಳಿಯಿದ್ದ 90 ಎಂ.ಎಲ್. ಪರಿಮಾಣದ ಒಟ್ಟು 53 ಸ್ಯಾಚೆಟ್ ಗಳನ್ನು (ಒಟ್ಟು ಮೌಲ್ಯ ರೂ 2125/- ) ಹಾಗೂ ಮದ್ಯ ಮಾರಾಟದಿಂದ ಸಂಗ್ರಹಿಸಿದ ಒಟ್ಟು ರೂ 230/- ರೂ ನಗದು ಹಣವನ್ನು ಸ್ವಾಧಿನಪಡಿಸಿಕೊಂಡು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 37/2024 ಕಲಂ: 32.34 ಕೆ ಇ ಆಕ್ಟ್ -1965 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು