Recent Posts

Sunday, January 19, 2025
ಸುದ್ದಿ

ಮಜಾ ಟಾಕೀಸ್ ಮುಗಿತು ಅಂತ ಚಿಂತೆ ಬಿಡಿ ಇಲ್ಲಿದೆ ನೋಡಿ ಮಜಾಟಾಕೀಸ್ ನ ಹೊಸ ಸುದ್ದಿ..!

ಬೆಂಗಳೂರು : 2015ರ ಫೆಬ್ರವರಿ 7 ರಂದು ಶುರುವಾಗಿದ್ದ ಮಜಾ ಟಾಕೀಸ್ ಸತತ ಎರಡುವರೆ ವರ್ಷ ಕಿರುತೆರೆಯ ವೀಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಕಲರ್ಸ್ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮವಾಗಿದ್ದ ಮಜಾ ಟಾಕೀಸ್ ಈಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದೆ.
ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರೆಲ್ಲಾ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಜಾ ಟಾಕೀಸ್ ಸಿನಿಮಾ ತಂಡದ ಪ್ರಮೋಷನ್ ಗಳಿಗೆ ಒಂದು ಒಳ್ಳೆಯ ವೇದಿಕೆಯೂ ಆಗಿತ್ತು.
ಇನ್ನು ಮಜಾ ಟಾಕೀಸ್ ಕಾರ್ಯಕ್ರಮ ಮುಗಿಸುತ್ತಿರುವ ಕುರಿತಂತೆ ನಟ ಸೃಜನ್ ಲೋಕೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಮಜಾ ಟಾಕೀಸ್ ಕಾರ್ಯಕ್ರಮದ ದೊಡ್ಡ ಪಯಣ ಕೊನೆಯ ಹಂತಕ್ಕೆ ಬಂದು ತಲುಪಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಎಂದು ಬರೆದಿದ್ದಾರೆ.
ಕಳೆದ ಶನಿವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಜಾ ಟಾಕೀಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯ ಚಿತ್ರೀಕರಣ ಅದ್ಧೂರಿಯಾಗಿ ನಡೆದಿದ್ದು ಆ ಸಂಚಿಕೆ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಸಾರವಾಗುವ ಸಾಧ್ಯತೆ ಇದೆ.
ಆದ್ರೆ ಮಜಾ ಟಾಕೀಸ್ ಬರಲ್ಲ ಅಂತ ನಿರಾಸೆಯಾಗಬೇಡಿ ಮಜಾ ಟಾಕೀಸ್ ಸೀಸನ್ ಒನ್ ಮುಗಿದಿದ್ದು ಸೀಸನ್ ಎರಡು ಶುರುವಾಗಲಿದೆ ಆದ್ರೆ ಮಜಾ ಟಾಕೀಸ್ ಯಾವಾಗಲು ಖುಷಿ ನೀಡಿ ನಗಿಸುತ್ತಿದ್ದ ಸೃಜಾ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಅಷ್ಟೇ.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response