ಪುತ್ತೂರು : ಉಜ್ರುಪಾದೆ ವಿನಾಯಕ ನಗರದ ಕೊರಗಜ್ಜ, ಮಂತ್ರ ಗುಳಿಗ ಸಾನಿಧ್ಯ : ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವದಲ್ಲಿ ಕೊರಗಜ್ಜನಿಗೆ ಬೆಳ್ಳಿಯ ಮುಟ್ಟಾಳೆ ಸಮರ್ಪಣೆ – ಕಹಳೆ ನ್ಯೂಸ್
ಪುತ್ತೂರು: ತುಳುನಾಡಿನ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಬಲ್ನಾಡು ಗ್ರಾಮದ ಉಜ್ರುಪಾದೆ ವಿನಾಯಕ ನಗರ ಶ್ರೀ ಕೊರಗಜ್ಜ ಮತ್ತು ಶ್ರೀ ಮಂತ್ರಗುಳಿಗ ದೈವಗಳ ಸಾನಿಧ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವವು ಮಾ.23ರಂದು ನಡೆಯಲಿದೆ.
ಬ್ರಹ್ಮಶ್ರೀ ವೇ.ಮೂ ರವಿಚಂದ್ರ ನೆಲ್ಲಿತ್ತಾಯ ಬಲ್ನಾಡು ಇವರ ನೇತೃತ್ವದಲ್ಲಿ ಸ್ಥಳಶುದ್ಧಿ, ನವಕಲಶಾಭಿಷೇಕ, ಗಣಹೋಮ ಸಂಜೆ ಶ್ರೀ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಶ್ರೀ ಮಂತ್ರಗುಳಿಗ ನೇಮೋತ್ಸವ ನಡೆದು, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ಬಳಿ ಶ್ರೀ ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮೋತ್ಸವ ಮತ್ತು ಶ್ರೀ ಕೊರಗಜ್ಜ ದೈವಕ್ಕೆ ಬೆಳ್ಳಿಯ ಮುಟ್ಟಾಳೆ ಸಮರ್ಪಣೆ ನಡೆಯಲಿದೆ. ಎಂದು ದೈವಸ್ಥಾನದ ಗೌರವಾಧ್ಯಕ್ಷ ಬಾಬು ಕುಲಾಲ್ ವಿನಾಯಕ ನಗರ, ಅನುವಂಶಿಕ ಮೊಕ್ತೇಸರ ಬಾಬು ನಲಿಕೆ, ಅಧ್ಯಕ್ಷ ನಾರಾಯಣ ಗೌಡ ಕುಕ್ಕುತ್ತಡಿ, ಕಾರ್ಯದರ್ಶಿ ಪೂರ್ಣಿಮಾ ಚೆನ್ನಪ್ಪ ಗೌಡ, ಉಪಾಧ್ಯಕ್ಷ ಉಮೇಶ್ ಪೂಜಾರಿ ಬಾಯಾರು, ಕೋಶಾಧಿಕಾರಿ ಕುಶಾಲಪ್ಪ ನಾಯ್ಕ ಪದವು, ಜತೆ ಕಾರ್ಯದರ್ಶಿ ಪ್ರೇಮ ದೇವಸ್ಯ, ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಊರ ಹತ್ತು ಸಮಸ್ತರು ತಿಳಿಸಿದ್ದಾರೆ.
ಉಜ್ರುಪಾದೆ ವಿನಾಯಕ ನಗರ ಶ್ರೀ ಕೊರಗಜ್ಜ ಮತ್ತು ಶ್ರೀ ಮಂತ್ರಗುಳಿಗ ಸಾನಿಧ್ಯಕ್ಕೆ ಊರ ಪರವೂರ ಭಕ್ತಾಭಿಮಾನಿಗಳ ಸಹಕಾರದಿಂದ ರೂ. 1.28ಲಕ್ಷ ವೆಚ್ಚದ (1ಕಿಲೋ 116 ಗ್ರಾಂ) ಬೆಳ್ಳಿಯ ಮುಟ್ಟಾಳೆಯನ್ನು ಲೋಕೇಶ್ ಆಚಾರ್ಯ ಬೀರಮಲೆ ಮತ್ತು ಭಾನುಪ್ರಕಾಶ್ ಆಚಾರ್ಯ ಕೋರ್ಟ್ ರಸ್ತೆ ಇವರು ತಯಾರಿಸಿ ನೀಡಿದ್ದು ಮಾ. 23ರಂದು ದೈವಕ್ಕೆ ಸಮರ್ಪಣೆಯಾಗಲಿದೆ.