Recent Posts

Sunday, January 19, 2025
ಬೆಂಗಳೂರುಸುದ್ದಿ

ಮೆಟ್ರೋದಲ್ಲಿ ಯುವಕ ಆತ್ಮಹತ್ಯೆ ಕೇಸ್:‌ ಸಾಯುವ ಮುನ್ನ ಪೋಷಕರಿಗೆ ಕಾಲ್‌ ಮಾಡಿದ್ದ ಧ್ರುವ್ – ಕಹಳೆ ನ್ಯೂಸ್

ಬೆಂಗಳೂರು: ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಠಾಣೆಯಲ್ಲಿ UDR ದಾಖಲಾಗಿದೆ.

ನ್ಯಾಷನಲ್ ಲಾ ಕಾಲೇಜ್ ಆಫ್ ಇಂಡಿಯಾ ಯುನಿವರ್ಸಿಟಿ ಹಾಸ್ಟೆಲ್ ಉಸ್ತುವಾರಿಯಿಂದ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಸ್ಟೆಲ್ ನಿಂದ ಕ್ಲಾಸ್ ಮೇಟ್ ಗೆ ಹೇಳಿ ಧ್ರುವ ಹೊರಗೆ ಬಂದಿದ್ದಾರೆ. ಹಾಸ್ಟೆಲ್ ನಿಂದ ಹೊರಟ ಬಳಿಕ ಮುಕ್ಕಾಲು ಘಂಟೆಗೆ ಘಟನೆ ಜರುಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಮೊದಲ ವರ್ಷದ ಬಿಎ ಎಲ್‌ಎಲ್ಬಿ ವಿದ್ಯಾರ್ಥಿಯಾಗಿರುವ ಧ್ರುವ್, ಮಾನಸಿಕ ಖಿನ್ನತೆಗೆ ಔಷಧಿಗಳನ್ನು ಪಡೆಯುತ್ತಿದ್ದ. ಈ ಬಗ್ಗ ಆತನ ಕುಟುಂಬಸ್ಥರಿಗೂ ತಿಳಿದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಗರಭಾವಿಯ ಕಾಲೇಜು ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಧ್ರುವ್, ಆತ್ಮಹತ್ಯೆ ಬಗ್ಗೆ ಕಾಲೇಜು ಸ್ನೇಹಿತರೊಂದಿಗೆ ಆಗಾಗ್ಗೆ ಹೇಳಿಕೊಳ್ಳುತ್ತಿದ್ದ. ನಿನ್ನೆ ಮೆಟ್ರೋ ಹಳಿಗೆ ಹಾರುವುದಕ್ಕೂ ಮುನ್ನ ಪೋಷಕರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ತನ್ನ ಜೀವನ ಅರ್ಥಹೀನ ಎಂದು ಹೇಳಿಕೊಂಡಿದ್ದಾನೆ. ಈ ವೇಳೆ ಪೋಷಕರು ಕಬ್ಬನ್ ಪಾರ್ಕ್’ಗೆ ಹೋಗಿ ಕೆಲ ಕಾಲ ಸಮಯ ಕಳೆಯುವಂತೆಯೂ ಹೇಳಿದ್ದಾರೆ. ನಂತರ ಫೋನ್ ಕಟ್ ಮಾಡಿರುವ ಧ್ರುವ್ ತನ್ನ ಲೊಕೇಷನ್ ನನ್ನು ಪೋಷಕರಿಗೆ ವಾಟ್ಸಾಪ್ ಮೂಲಕ ಹಂಚಿಕೊಂಡು, ಹಳಿಗೆ ಹಾರಿದ್ದಾನೆ.

ನಂತರ ಧ್ರುವ್ ಪೋಷಕರಿಗೆ ಮಗನನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಬಳಿಕ ಆತನ ಸ್ನೇಹಿತರಿಗೆ ಕರೆ ಮಾಡಿ, ಮಗನಿರುವ ಸ್ಥಳಕ್ಕೆ ಹೋಗಿ ಪರಿಶೀಲಿಸುವಂತೆ ತಿಳಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಆತ್ಮಹತ್ಯೆಗೆ ಶರಣಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‌ಎಲ್‌ಎಸ್‌ಐಯು ಉಪಕುಲಪತಿ ಸುಧೀರ್ ಕೃಷ್ಣಸ್ವಾಮಿ ಅವರು ಮಾತನಾಡಿ, ವಿದ್ಯಾರ್ಥಿಯೊಬ್ಬನ ಹಠಾತ್ ಮತ್ತು ಅನಿರೀಕ್ಷಿತ ನಿಧನದಿಂದ ವಿಶ್ವವಿದ್ಯಾನಿಲಯವು ತೀವ್ರ ಆಘಾತ ಮತ್ತು ದುಃಖಿತವಾಗಿದೆ. ಗೌರವಾರ್ಥವಾಗಿ, ವಿಶ್ವವಿದ್ಯಾನಿಲಯವು ವಾರದ ಉಳಿದ ಅವಧಿಗೆ ತರಗತಿಗಳನ್ನು ಸ್ಥಗಿತಗೊಳಿಸುತ್ತದೆ ಎಂದು ಹೇಳಿದ್ದಾರೆ, ಘಟನೆ ಸಂಬಂಧ ಚಂದ್ರಾ ಲೇಔಟ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.