Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ : ಗಾಯಗೊಂಡ ವಾಹನ ಸವಾರ – ಕಹಳೆ ನ್ಯೂಸ್

ಬಂಟ್ವಾಳ: ಖಾಸಗಿ ಬಸ್ಸೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸವಾರ ಗಾಯಗೊಂಡ ಘಟನೆ ಬೆಂಜನಪದವು ಸಮೀಪದ ಶಿವಾಜಿ ನಗರದಲ್ಲಿ ನಡೆದಿದೆ.

ಬೆಂಜನಪದವು ನಿವಾಸಿ ನವೀನ್ ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾನೆ. ಮಲ್ಲೂರು ಕಡೆಯಿಂದ ಬೆಂಜನಪದವು ಕಡಗೆ ಬರುತ್ತಿದ್ದ ರಾಜಲಕ್ಷೀ ಬಸ್ ಹಾಗೂ ಬೆಂಜನಪದವು ಕಡೆಯಿಂದ ಹೋಗುತ್ತಿದ್ದ ಸ್ಕೂಟರ್ ನಡುವೆ ಶಿವಾಜಿನಗರದ ತಿರುವಿನಲ್ಲಿ ಅಪಘಾತ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಿಂದ ಸ್ಕೂಟರ್ ರಸ್ತೆಯ ಪಕ್ಕ ಪಕ್ಷಿಯಾಗಿದೆ. ಅಪಘಾತದಲ್ಲಿ ಸ್ಕೂಟರ್ ಸವಾರನಿಗೆ ಗಾಯವಾಗಿದ್ದು, ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಬಸ್ ಡಿಕ್ಕಿಯಾದ ರಭಸಕ್ಕೆ ಚಾಲಕನಿಗೆ ನಿಯಂತ್ರಣ ಸಾಧಿಸಲು ಸಾಧ್ಯವಾಗದೆ ಕೆಂಪುಕಲ್ಲಿನ ಕೋರೆಯ ಗುಡ್ಡದ ಮೇಲೆ ಹತ್ತಿ ವಾರೆಯಾಗಿ ನಿಂತುಕೊಂಡಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯವಿಲ್ಲದೆ ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಕುಮಾರ್, ಮೆಲ್ಕಾರ್ ಟ್ರಾಫಿಕ್ ಎ.ಎಸ್.ಐ.ಸುರೇಶ್,ಎಚ್.ಸಿ.ಚಂದ್ರಿಕಾ ಹಾಗೂ 112 ವಾಹನ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.