Sunday, November 24, 2024
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ : ಪ್ರತೀಯೊಂದು ಕ್ಷೇತ್ರದಲ್ಲೂ ಶಾಸಕರ ಸೇವೆ ಅಭಿನಂದನಾರ್ಯ: ಕಾವು ಹೇಮನಾಥ ಶೆಟ್ಟಿ – ಕಹಳೆ ನ್ಯೂಸ್

ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀರಾಮ ಕೃಷ್ಣ ಪ್ರೌಢ ಶಾಲೆ ಕೊಂಬೆಟ್ಟು ಇದರ ವತಿಯಿಂದ ಪುತ್ತೂರಿನ ಬಂಟರ ಭವನದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರವು ಮಾ.23 ರಂದು ನಡೆಯಿತು.

ಕಾರ್ಯಾಗಾರವನ್ನು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಾಸಕರಾದ ಅಶೋಕ್ ರೈ ನೇತೃತ್ವದಬಟ್ರಸ್ಟ್ ಮೂಲಕ ಈ ಕಾರ್ಯಾಗಾರ ನಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಟ್ರಸ್ಟ್ ಮೂಲಕ ಸಮಾಜದಲ್ಲಿ ನೊಂದವರ ಕಣ್ಣೀರೊರೆಸುತ್ತಿದ್ದ ಶಾಸಕ ಅಶೋಕ್ ರೈ ಯವರು ಶಾಸಕರಾದ ಬಳಿಕ ಎಲ್ಲಾ ರಂಗದಲ್ಲೂ ತನ್ನ ಸೇವೆ ಯನ್ನು ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಇವತ್ತಿನ ಕಾರ್ಯಾಗಾರ ಮಾಡುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಮಾಹಿತಿ ಲಭ್ಯವಾಗಲಿದೆ. ನಾವು ಪೂರ್ವಾಪರ ತಿಳಿಯದೆ ಯಾವುದೇ ವೃತ್ತಿಪರ ಕೋರ್ಸನ್ನು ಆಯ್ಕೆ ಮಾಡಬಾರದು.‌ವಿದ್ಯೆಯು ನಮ್ಮ‌ಬದುಕನ್ನು ಬದಲಿಸುವ ತಾಕತ್ತು ಇದೆ. ಪ್ರತೀಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇದೆ ಆದರೆ ಪ್ರದರ್ಶಿಸಲು ಅವಕಾಶ ಸಿಗದೇ ಇರುವುದರಿಂದ ಆತನಲ್ಲಿರುವ ಪ್ರತಿಭೆ ಕರಟಿ ಹೋಗುತ್ತದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರಾದ ಅಶೋಕ್ ರೈ ಅವರು ಟ್ರಸ್ಟ್ ಮೂಲಕ ಬಡವರ ಸೇವೆ, ಅನಾರೋಗ್ಯ ಪೀಡಿತರ ಸೇವೆ, ನಿರ್ಗತಿಕರ ಸೇವೆ, ನಿರುದ್ಯೋಗಿಗಳಿಗೆ ಸಹಕಾರ, ವಿದ್ಯಾರ್ಥಿಗಳಿಗೆ ಮಾಹಿತಿ ಸೇರಿದಂತೆ ಎಲ್ಲಾ ವಿಚಾರದಲ್ಲೂ ಟ್ರಸ್ಟ್ ಮೂಲಕ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಟ್ರಸ್ಟ್ ಸದಸ್ಯರೂ, ಪುಡಾ ಸದಸ್ಯರೂ ಆದ ನಿಹಾಲ್ ಶೆಟ್ಟಿ ಮಾತನಾಡಿ‌ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ. ಕಲಿಯುವ ಮನಸ್ಸು ಇರುವ ಪ್ರತೀಯೊಬ್ಬರಿಗೂ ಸಾಕಷ್ಟು ಅವಕಾಶಗಳು ಇದೆ. ಮಾಹಿತಿಯ ಕೊರತೆಯಿಂದ ನಾವು ಕೆಲವೊಂದನ್ನು ಕಳೆದುಕೊಳ್ಳುತ್ತಿದ್ದೇವೆ.‌ ಕಲಿಕೆಯ ವಿಚಾರದಲ್ಲಿ ನಾವು ಎಷ್ಟೇ‌ಮಾಹಿತಿ ಪಡೆದುಕೊಂಡರೂ ಅದು ಕಡಿಮೆಯೇ ಎಂದು‌ಹೇಳಿದ ಅವರು ನಾವು ಸೂಕ್ತ ತಿಳುವಳಿಕೆ ಇಲ್ಲದೆ ಯಾವುದನ್ನು ಆಯ್ಕೆ ಮಾಡಬಾರದು ಎಂದು ಹೇಳಿದರು.

ಇಂಟರ್‌ನೆಟ್ ಬಳಕೆ ಮಾಡಿ‌ಮೊಬೈಲ್ ಮೂಲಕವೇ ಬ್ಯುಸಿನೆಸ್ ಮಾಡುವ ಅನೇಕ‌ಮಂದಿ‌ನಮ್ಮೊಳಗಿದ್ದಾರೆ. ಆಸಕ್ತಿ ಇದ್ದರೆ ನಾವು ಏನು ಬೇಕಾದರೂ‌ಮಾಡಬಹುದು ಎಂದು ಹೇಳಿದರು. ಬೆಳ್ಳಾರೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ‌ವಿ ಸೂರ್ಯನಾರಾಯಣ ಕಾರ್ಯಾಗಾರ ನಡೆಸಿದರು.
ವೇದಿಕೆಯಲ್ಲಿ‌ ಟ್ರಸ್ಟಿನ‌ ಸದಸ್ಯರಾದ ಕೃಷ್ಣಪ್ರಸಾದ್ ಭಟ್ ಬೊಳ್ಳಾಯಿ, ತರಬೇತಿ ದಾರೆ ಶ್ರದ್ದಾ ಉಪಸ್ಥಿತರಿದ್ದರು.

ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಸ್ವಾಗತಿಸಿದರು. ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ‌ನಿರೂಪಿಸಿ ವಂದಿಸಿದರು.