Friday, September 20, 2024
ರಾಜಕೀಯಸುದ್ದಿ

ಸಂಗಬೆಟ್ಟು ಉಪಚುನಾವಣೆ: ಇವಿಎಂ ಮತಯಂತ್ರ ಅಳವಡಿಕೆ ಹಾಗೂ ಪರಿಶೀಲನೆ – ಕಹಳೆ ನ್ಯೂಸ್

ಸಂಗಬೆಟ್ಟು: ಅ, 28 ರಂದು ನಡೆಯುವ ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಇವಿಎಂ ಮತಯಂತ್ರ ಅಳವಡಿಕೆ ಹಾಗೂ ಪರಿಶೀಲನಾ ಕಾರ್ಯ ನಡೆಯಿತು.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಚುನಾವಣಾದಿಕಾರಿಗಳ ಸಹಯೋಗದಲ್ಲಿ ಇವಿಎಂ ಮತಯಂತ್ರ ಅಳವಡಿಕಾ ಕಾರ್ಯದಲ್ಲಿ ತೊಡಗಿಕೊಂಡರು. ಒಟ್ಟು 10 ಬೂತ್‌ಗಳಲ್ಲಿ ಚುನಾವಣೆಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಎರಡು ಸಾಮಾನ್ಯ ಮತಗಟ್ಟೆಗಳನ್ನು ಹೊರತು ಪಡಿಸಿದರೆ ಉಳಿದ ೮ ಮತಗಳು ಸೂಕ್ಷ್ಮ ಮತಗಟ್ಟೆಗಳಿವೆ ಎಂದು ತಹಶೀಲ್ದಾರ್ ಅವರು ಮಾಹಿತಿ ನೀಡಿದರು. ಸಂಗಬೆಟ್ಟು ಕ್ಷೇತ್ರದಲ್ಲಿ 4685 ಪುರುಷರು, 4767 ಮಹಿಳೆಯರು ಸೇರಿ ಒಟ್ಟು 9453 ಮತದಾರರು ತಮ್ಮ ಹಕ್ಕನ್ನು ಚಲಾಯಿಸುವರು.

ಚುನಾವಣೆಗೆ ತಾಲೂಕಾಡಳಿತ ಸಕಲ ಪೂರ್ವತಯಾರಿಯನ್ನು ಮಾಡಿಕೊಂಡಿದ್ದು, ಶಾಂತ ಮತದಾನಕ್ಕೆ ಸಿದ್ಧತೆಯನ್ನು ನಡೆಸಿದೆ ಎಂದು ತಹಶೀಲ್ದಾರ್ ಅವರು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ದಿನೇಶ್ ಸುಂದರ ಶಾಂತಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಪ್ರಭಾಕರ ಪ್ರಭು ಅವರು ಕಣದಲ್ಲಿದ್ದಾರೆ.