Sunday, January 19, 2025
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡುಬಿದಿರೆಯಲ್ಲಿ ಮತ ಬೇಟೆ ನಡೆಸಿದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ – ಕಹಳೆ ನ್ಯೂಸ್

ಮೂಡುಬಿದಿರೆ : ಬಿಜೆಪಿ ಮಂಗಳೂರು ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಚುನಾವಣಾ ಅಭ್ಯರ್ಥಿ ಘೋಷಣೆ ನಂತರ ಪ್ರಥಮ ಬಾರಿಗೆ ಮೂಡುಬಿದಿರೆಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ವಿದ್ಯಾಗಿರಿಯಿಂದ ಬೈಕ್ ರಾಲಿ ಮೂಲಕ ಪೇಟೆಗೆ ಅಭ್ಯರ್ಥಿಯನ್ನು ಬಿಜೆಪಿ ಕಾರ್ಯ ಕರ್ತರು ಜಯಗೋಷ ದೊಂದಿಗೆ ಕರೆತಂದರು ಮೂಡುಬಿದಿರೆ ಡಾ ಎಂ.ಮೋಹನ್ ಆಳ್ವ ನಿವಾಸ, ಜೈನಮರ ಸೇರಿದಂತೆ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.


ಸ್ಥಳೀಯ ಮಠಾಧೀಶರೊಂದಿಗೆ ಚರ್ಚೆ ನಡೆಸಿದರು. ಕನ್ನಡ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನನಗೆ ಈ ಬಾರಿ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಕಾರ್ಯಕರ್ತರು ಬಹಳ ಶ್ರಮಿಸಿ ಪಕ್ಷ ಬೆಳೆಸಿದ್ದಾರೆ. ನಾನು ಜವಾಬ್ದಾರಿ ಯಿಂದ ಕೆಲಸ ಮಾಡುತ್ತೇನೆ. ಮೋದಿಯವರ ನಾಯಕತ್ವಕ್ಕೆ ಕಾರ್ಯಕರ್ತರು ಬೆಲೆ ನೀಡಿದ್ದಾರೆ. ಸೈನಿಕ ನಿಗೆ ಕೊಟ್ಟ ಗೌರವ ಇದಾಗಿದೆ. ಈ ಬಾರಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಕಾರ್ಯಕರ್ತರು ಬಿಜೆಪಿ ಗೆಲ್ಲಿಸಲು ಶ್ರಮಿಸುವಂತೆ ಸಲಹೆಯಿತ್ತರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿಲ್ಲ. ಕಾಂಗ್ರೆಸ್ ಮೋಸದಿಂದ ಅಧಿಕಾರ ಪಡೆದಿದೆ. ಸೇಡಿನ ರಾಜಕಾರಣ ಮಾಡುತ್ತಿದೆ. ಆದರೆ ಭಾರತ ವೇಗದ ಬೆಳವಣಿಗೆ ಪಡೆಯುತ್ತಿದೆ. ಮೋದಿ ಈ ಕಾರಣಕ್ಕೆ ದೇಶಕ್ಕೆ ಬೇಕಾಗಿದೆ. ಜಿಲ್ಲೆಯಲ್ಲಿ ಸೈನಿಕನಿಗೆ ಸ್ಪರ್ಧಾ ಅವಕಾಶ ಸಿಕ್ಕಿದೆ.ಮೋದಿ ಸಾಧನೆಗೆ ಬೋನಸ್ ಮತ ನೀಡಿ ಮೂಡುಬಿದಿರೆ ಕ್ಷೇತ್ರದಲ್ಲಿ 50ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕಾಗಿದೆ ಎಂದರು.
ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಮೇಘನಾಥ ಶೆಟ್ಟಿ, ಕ್ರೈಸ್ತ ಅಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ಜಾಯ್ಲುಸ್ ಡಿಸೋಜ, ಪುರಸಭಾ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ರಾಜ ಹೆಗ್ಡೆ, ಭುವನಾಭಿರಾಮ ಉಡುಪ,ಶಾಂತಿ ಪ್ರಸಾದ್ ಹೆಗ್ಡೆ, ಚುನಾವಣಾ ಪ್ರಭಾರಿ ಚಂದ್ರಶೇಖರ ಬಪ್ಪಳಿಗೆ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್. ಮಾಜಿ ಅಧ್ಯಕ್ಷ ಈಶ್ವರ್ ಕಟೀಲ್, ಸುನಿಲ್ ಆಳ್ವ, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ , ಹರಿಪ್ರಸಾದ್, ಎಸ್ ಸಿ ಮೋರ್ಚಾ ಅಧ್ಯಕ್ಷ ಜಗನ್ನಾಥ,ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಲಕ್ಷ್ಮಣ ಪೂಜಾರಿ, ನಾಗವರ್ಮ ಜೈನ್, ಸೋಮನಾಥ್ ಕೋಟ್ಯಾನ್, ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರು, ಪುರಸಭೆ ಸದಸ್ಯರು ಸೇರಿದಂತೆ ಪ್ರಮುಖರು ಈ ಸಂದರ್ಭದಲ್ಲಿದ್ದರು. ಗಣೇಶ್ ಅಳಿಯೂರು ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು