Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ; ಪಚ್ಚಿನಡ್ಕ ದಿ.ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ಲೋಕಾರ್ಪಣೆ , ಹಾಗೂ ಪುತ್ಥಳಿಯ ಅನಾವರಣ ಕಾರ್ಯಕ್ರಮ –ಕಹಳೆ ನ್ಯೂಸ್

ಬಿಲ್ಲವ ಸಮುದಾಯದ ನಾಯಕ, ಸರಳ ಸಜ್ಕನಿಕೆಯ,ಕೊಡುಗೈ ದಾನಿ,ಉದ್ಯಮಿಯಾಗಿದ್ದ ದಿ.ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರ ಸ್ಮಾರಕ ವೃತ್ತದ ಲೋಕಾರ್ಪಣೆ ಹಾಗೂ ಪುತ್ಥಳಿಯ ಅನಾವರಣ ಕಾರ್ಯಕ್ರಮ ಮಾ.24 ರಂದು ಆದಿತ್ಯವಾರ ಸಂಜೆ ವೇಳೆ ನಡೆಯಿತು.

ಪೊಳಲಿ ತಪೋವನದ ವಿವೇಕಾಚೈತ್ಯಾನಂದ ಸ್ವಾಮಿ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರು ದೀಪ ಬೆಳಗಿಸಿದರು.
ಪೊಳಲಿ ತಪೋವನದ ವಿವೇಕಾಚೈತ್ಯಾನಂದ ಸ್ವಾಮಿ ಮಾತನಾಡಿ, ಜೀವನದಲ್ಲಿ ವ್ಯಕ್ತಿ ಮಾಡಿದ ಒಳ್ಳಯತನ ಹಾಗೂ ಸಮಾಜದಲ್ಲಿ ಗುರುತಿಸಿಕೊಂಡಿರುವ ರೀತಿ ಮಾತ್ರ ಜೀವನ ನಂತರವೂ ಜೀವಂತವಾಗಿರುತ್ತದೆ ಎಂದು ಅವರು ತಿಳಿಸಿದರು. ವೃತ್ತ ಅಥವಾ ಪುತ್ಥಳಿ ನಿರ್ಮಾಣ ಮಾಡುವುದು ಸುಲಭ,ಆದರೆ ಮುಂದಿನ ದಿನಗಳಲ್ಲಿ ಅದರ ರಕ್ಷಣೆ ಮತ್ತು ನಿರ್ವಹಣೆ ಉತ್ತಮವಾಗಿ ಮಾಡುವ ಜವಬ್ದಾರಿ ನಮ್ಮ ಮೇಲಿದ್ದು,ಅಗೌರವ ತರುವ ಕೆಲಸ ಆಗಬಾರದು ಎಂದು ಅವರು ಹೇಳಿದರು.
ಸೇಸಪ್ಪ ಕೋಟ್ಯಾನ್ ಅವರ ಹೆಸರು ಹೇಳುವುದಕ್ಕಿಂತ ಅವರ ಬದುಕಿನ ಆದರ್ಶದ ವ್ಯಕ್ತಿತ್ವವನ್ನು,ಉತ್ತಮ ಗುಣನಡತೆಯನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದಿ.ಸೇಸಪ್ಪ ಕೋಟ್ಯಾನ್ ಸುಕೃತ ಕರ್ಮಗಳನ್ನು ಬಹಳ ಪ್ರಾಮಾಣಿಕವಾಗಿ ಮಾಡಿದ್ದಾರೆ. ಬಡವರ ಕಣ್ಣೀರು ಒರೆಸುವ ಕಾರ್ಯವನ್ನು ಸಮಾಜಸೇವೆ ಮೂಲಕ ಮಾಡಿದ್ದಾರೆ. ಅನೇಕ ಧಾರ್ಮಿಕ ,ಸಾಮಾಜಿಕ, ಶೈಕ್ಷಣಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಓರ್ವ ಸಾಧಕನಾಗಿ ಬೆಳೆದವರು,ಶಕ್ತಿಯನ್ನು ನೀಡಿದವರು ಎಂದು ತಿಳಿಸಿದರು.
ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮ ಗುರು ಆಂಟನಿ ಲೋಬೋ, ಉದ್ದಬೆಟ್ಟು ಮಸೀದಿಯ ಧರ್ಮ ಗುರು ಕೆ.ವಿ.ಮಜೀದ್ ದಾರಿಮಿ,ದಿ.ಸೇಸಪ್ಪ ಕೋಟ್ಯಾನ್ ಅವರ ಧರ್ಮಪತ್ನಿ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ನಿವೃತ್ತ ಮುಖ್ಯೋಪಾಧ್ಯಾಯ ಜಯರಾಮ ಶೆಟ್ಟಿ ಕೊಡಂಗೆ, ಬೆಂಜನಪದವು ಕರಾವಳಿ ಕಾರ್ಟೂನ್ಸ್ ಕೆ.ಪಿ.ಶೆಟ್ಟಿ, ಗುತ್ತಿಗೆದಾರ ದಿವಾಕರ್ ಮತ್ತಿತರ ಪ್ರಮುಖರು ಹಾಜರಿದ್ದರು.
ಪಚ್ಚಿನಡ್ಕ ದಿ.ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ನಿರ್ಮಾಣ ಸಮಿತಿ ಅಧ್ಯಕ್ಷ ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸ್ವಾಗತಿಸಿ, ಚಂದ್ರಶೇಖರ ಭಂಡಾರಿ ವಂದಿಸಿದರು.
ಶಿಕ್ಷಕ ರಾಮಚಂದ್ರರಾವ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು