Saturday, November 23, 2024
ಸುದ್ದಿ

ಸ್ಕಂದಶ್ರೀ ಸೇವಾ ಸಮಿತಿ ನೀರುಮಾರ್ಗ ಇದರ 10ನೇ ವಾರ್ಷಿಕೋತ್ಸವದ ಸಮಾರಂಭ ಕಾರ್ಯಕ್ರಮ – ಕಹಳೆ ನ್ಯೂಸ್

ಸ್ಕಂದಶ್ರೀ ಸೇವಾ ಸಮಿತಿ ನೀರುಮಾರ್ಗ ಇದರ 10ನೇ ವಾರ್ಷಿಕೋತ್ಸವದ ಸಮಾರಂಭ ಕಾರ್ಯಕ್ರಮವು ಮಾರ್ಚ್ 23ರಂದು ಶನಿವಾರ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ ಇದರ ಮುಂಭಾಗದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಜಗದೀಶ್ ಐತಾಳ್ ಸುರತ್ಕಲ್ ಇವರ ನೇತೃತ್ವದಲ್ಲಿ ಸಾರ್ವಜನಿಕ ಶನೈಶ್ಚರ ಪೂಜೆ ನಡೆಯಿತು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಸಭಾಕಾರ್ಯಕ್ರಮದ ಅಂಗವಾಗಿ ಯೋಧರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಧವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯಕಲಾ ಭಾರತಿ ನೀರುಮಾರ್ಗ ವಿದುಷಿ ಶ್ರೀಮತಿ ಶುಭ ಶೇಷಾದ್ರಿ ಇವರ ಶಿಷ್ಠೆಯರಾದ ಸಾಕ್ಷಿ ಎಸ್ ಭಟ್ ಮತ್ತು ಸಂಹಿತ ಆರ್ ಭಟ್ ಇವರಿಂದ ಭರತನಾಟ್ಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು. ನಂತರ ಕಲಾಕುಂಭ ಕುಳಾಯಿ ತಂಡದಿAದ ಪಾಡ್ಡನ ಆಧಾರಿತ “ಪರಮಾತ್ಮ ಪಂಜುರ್ಲಿ” ತುಳು ನಾಟಕ ಪ್ರದರ್ಶನಗೊಂಡಿತು. ನಾಗೇಶ್ ಕುಲಾಲ್ ಇವರ ಸಾರಥ್ಯದಲ್ಲಿ ಪ್ರದರ್ಶನಗೊಂಡ ಈ ನಾಟಕಕ್ಕೆ ಪ್ರೇಕ್ಷಕರಿಂದ ಭರಪೂರ ಪ್ರಶಂಸೆ ವ್ಯಕ್ತವಾಯಿತು.

ಕಾರ್ಯಕ್ರಮವನ್ನು ಉಡುಪಿಯ ಉಜ್ವಲ್ ಗ್ರೂಪ್ ಆಫ್ ಕಂಪೆನೀಸ್’ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಅಜಯ್ ಪಿ ಶೆಟ್ಟಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಶ್ರೀ ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು ವಹಿಸಿದರು. ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಶ್ರೀ ಕಿರಣ ರಾಮ್ ಧಾರ್ಮಿಕ ಉಪನ್ಯಾಸ ನೀಡಿದರು. ಅತಿಥಿಗಳಾದ ವಿಜಯಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಶ್ರೀ ವಿಜಯ್ ಕೋಟ್ಯಾನ್ ಪಡು, ಕುಸುಮ ಟ್ರಾವೆಲ್ಸ್ ‘ನ ಮಾಲಕರಾದ ಶ್ರೀ ಸತ್ಯರಾಜ್ ಶೆಟ್ಟಿ, ನೀರುಮಾರ್ಗ ಸುಬ್ರಹ್ಮಣ್ಯ ಭಜನಾ ಮಂಡಳಿಯ ಅಧ್ಯಕ್ಷ ಶ್ರೀ ಶೇಷಾದ್ರಿ ಭಟ್, ಸ್ಕಂದಶ್ರೀ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಕೇಶವ್ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಯಿತು. ಹವಾಲ್ದಾರ್ ಶ್ರೀ ಜೋಗಿ ಎಸ್ ತಮ್ಮಯ್ಯ, Ex- Army ಶ್ರೀ ಡೇನಿಯಲ್ ವಾಸ್, ಆಂತರಿಕ ಭದ್ರತಾ ವಿಭಾಗ A.S.I ಶ್ರೀ ಗೋಪಾಲಕೃಷ್ಣ ಕೆ, ವಿಜ್ಞಾನಿ ಶ್ರೀ ಕೆ ತಂಪನ್, ಶಿಲ್ಪಿ ಹಾಗೂ ಕರಸೇವಕರು ಶ್ರೀ ವಿನಾಯಕ್ ಶೇಟ್, ಕರಸೇವಕರು ಶ್ರೀ ಲಕ್ಷ್ಮಣ್ ಪರಾರಿ, ಪ್ರಾಣಿ ರಕ್ಷಕಿ, ಸಮಾಜ ಸೇವಕಿ ಶ್ರೀಮತಿ ರಜನಿ ದಾಮೋದರ್ ಶೆಟ್ಟಿ. ಕಾವೇರಿ ಆಂಬುಲೆನ್ಸ್ ಚಾಲಕಿ – ಮಾಲಕಿ ಶ್ರೀಮತಿ ಸಿ. ಎಸ್. ರಾಧಿಕಾ, ಶಿಲ್ಪಿ ಹಾಗೂ ಚಿತ್ರ ಕಲಾವಿದರು ಶ್ರೀ ಕೆ ಆರ್ ಜಯಪ್ರಸಾದ್ ಆಚಾರ್ಯ, ಜೀವ ರಕ್ಷಕಿ ಶ್ರೀಮತಿ ಚಂದ್ರಾವತಿ ಮಂದಾರ, ಯಕ್ಷಗಾನ ಕಲಾವಿದರು ಹಾಗೂ ರಂಗ ಪರಿಕಲಾಕಾರರು ಶ್ರೀ ಕೇಶವ್ ರಾವ್, ದೈವ ಚಾಕರಿಯವರು ಶ್ರೀ ನೋಣಯ್ಯ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

ಎದೆ ತುಂಬಿ ಹಾಡುವೆನು ಖ್ಯಾತಿಯ ಶ್ರೀ ಸಂದೇಶ್ ನೀರುಮಾರ್ಗ ಪ್ರಾರ್ಥನೆಗೈದರು. ಶ್ರೀ ಹರೀಶ್ ನೀರುಮಾರ್ಗ ಅತಿಥಿಗಳನ್ನು ಸ್ವಾಗತಿಸಿದರು. ಕು. ಶ್ರೀದೇವಿ ನೀರುಮಾರ್ಗ ವರದಿ ವಾಚಿಸಿದರು. ಶ್ರೀಮತಿ ಪ್ರಮೀಳಾ ತಾರನಾಥ್ ಸನ್ಮಾನ ವಾಚಿಸಿದರು. ಶ್ರೀಮತಿ ಜ್ಯೋತಿಲಕ್ಷ್ಮಿ ವಿನೋದ್ ವಂದಿಸಿದರು. ಶ್ರೀ ಕೀರ್ತಿರಾಜ್ ಪಡು ಕಾರ್ಯಕ್ರಮ ನಿರೂಪಿಸಿದರು.

ಸಮಿತಿಯ ಕಾರ್ಯದರ್ಶಿ ಶ್ರೀ ಅತುಲ್, ಕೋಶಾಧಿಕಾರಿ ಶ್ರೀ ಪ್ರದೀಪ್ ಕುಮಾರ್, ಸಮಿತಿಯ ಸದಸ್ಯರಾದ ಶ್ರೀ ಪ್ರಕಾಶ್ಚಂದ್ರ, ಶ್ರೀ ತುಕಾರಾಮ್, ಶ್ರೀ ಗೋಪಾಲಕೃಷ್ಣ, ಶ್ರೀ ಅನಂತ ಆಚಾರ್ಯ, ಶ್ರೀ ರಾಜೇಶ್ ಅಮೀನ್, ಶ್ರೀ ಅರುಣ್ ಕುಮಾರ್, ಶ್ರೀ ರಾಜೇಶ್ ಸುಬ್ರಹ್ಮಣ್ಯ ನಗರ, ಶ್ರೀ ರಾಜೇಶ್ ಕುಮಾರ್, ಶ್ರೀ ದೇವಿಪ್ರಕಾಶ್, ಶ್ರೀ ವಿನೋದ್ ಕುಮಾರ್, ಶ್ರೀ ತಾರನಾಥ್, ಶ್ರೀ ಗಣೇಶ್, ಶ್ರೀ ಸಂದೀಪ್ ಸುಬ್ರಹ್ಮಣ್ಯ ನಗರ, ಶ್ರೀ ಅಭಿಮಾನ್ ಕುಲಾಲ್, ಶ್ರೀ ಯಶ್ವಿನ್, ಶ್ರೀ ಚೇತನ್ ಉಪಸ್ಥಿತರಿದ್ದರು