Sunday, January 19, 2025
ದಕ್ಷಿಣ ಕನ್ನಡಬಂಟ್ವಾಳರಾಜಕೀಯಸುದ್ದಿ

ನರಿಕೊಂಬು ಮಹಾ ಶಕ್ತಿ ಕೇಂದ್ರದಲ್ಲಿ ಚುನಾವಣಾ ಪ್ರಚಾರ ಸಭೆ- ಕಹಳೆ ನ್ಯೂಸ್

ನರಿಕೊಂಬು ಮಹಾ ಶಕ್ತಿ ಕೇಂದ್ರದ ಚುನಾವಣಾ ಪ್ರಚಾರ ಸಭೆ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಅವರ ಮನೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಪ್ರತಿಬಾರಿಯೂ ಕ್ಷೇತ್ರದ ಮತದಾರರು ನನಗೆ ಪ್ರೀತಿ ನೀಡಿ,ಕೈ ಹಿಡಿದಿದ್ದಾರೆ. ಅದೇ ಪ್ರೀತಿಯನ್ನು ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಅವರಿಗೆ ನೀಡಬೇಕು ,ಅತ್ಯಧಿಕ ಮತಗಳ ಅಂತರದಿAದ ಗೆಲುವು ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಜಗದ್ಗುರು ಭಾರತದ ಕಲ್ಪನೆಗೆ ಸಕಾರವಾಗಲು ಜಿಲ್ಲೆಯ ಮತದಾರರು ನೆರವಾಗಬೇಕು ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ,ಜಿಲ್ಲೆಯ ಸಂಘಟನೆಗೆ ಮೂಲಪ್ರೇರಣೆ ಕಲ್ಲಡ್ಕ ವಾಗಿದ್ದು, ಇನ್ನಷ್ಟು ಶಕ್ತಿ ನೀಡುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಯಾವುದೇ ಭ್ರಮೆಯಲ್ಲಿಯಿಲ್ಲ,ಎಲ್ಲರನ್ನು ಒಂದುಗೂಡಿಸಿ, ಜಿಲ್ಲೆಯ ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಗೌರವ ತರುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದರು.
2024 ರ ಚುನಾವಣೆ ಭವಿಷ್ಯದ ಚುನಾವಣೆಯಾಗಿದ್ದು, ಅತ್ಯಂತ ಪ್ರಮುಖವಾದ ಮಹತ್ವವಾದ ಚುನಾವಣೆಯಾಗಿದ್ದು, ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮಹತ್ತರವಾದ ಯೋಜನೆಗಳನ್ನು ಮತ್ತು ಭ್ರಷ್ಟಚಾರ ಮುಕ್ತವಾದ ,ಭಯೋತ್ಪಾದನೆ ನಿರ್ಮೂಲನೆ ಮಾಡಿ, ಭಯಮುಕ್ತವಾದ ಜೀವನಕ್ಕೆ ಮೋದಿಯವರ ದಿಟ್ಟ ಆಡಳಿತದಿಂದ ಸಾಧ್ಯವಾಗಿದ್ದು, ಇಂತಹ ಅನೇಕ ವಿಚಾರಗಳನ್ನು ಮತದಾರರಿಗೆ ತಿಳಿಸುವ ಕಾರ್ಯ ಆಗಬೇಕಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕರ್ತರ ಆಶ್ರೀರ್ವಾದ,ಪ್ರೀತಿ ವಿಶ್ವಾಸ ಇಲ್ಲದೆ ಹೋದರೆ ಬಿಜೆಪಿಯಲ್ಲಿ ನಾಯಕನಾಗಿ ಬೆಳೆಯಲು ,ಅಭ್ಯರ್ಥಿಯಾಗಲು ಅವಕಾಶ ಸಿಗುವುದೇ ಇಲ್ಲ ಎಂದು ಅವರು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯಕೊಡುವ ಕಾರ್ಯ ನರೇಂದ್ರ ಮೋದಿ ಆಡಳಿತದಲ್ಲಿ ಮಾಡಲಾಗಿದೆ. ಹಿಂದುತ್ವದ ವಿಚಾರಧಾರೆಗಳಿಗೆ ಶಕ್ತಿತುಂಬುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಅಕ್ಷರಶ ನಿಜವಾಗಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕನಸಿಗೆ ಪೂರಕವಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಿತೋರಿಸುತ್ತೇನೆ ಎಂದು ತಿಳಿಸಿದರು.
ಸವಾಲಿನ ಮಧ್ಯೆ ಬಂಟ್ವಾಳವನ್ನು ಬಿಜೆಪಿಯ ಭದ್ರವಾದ ಕೋಟೆಯಾಗಿ ಕಟ್ಟಿದ ಶಾಸಕ ರಾಜೇಶ್ ನಾಯ್ಕ್ ಅವರು ನನಗೆ ಪ್ರೇರಣೆಯಾಗಿದ್ದಾರೆ
ಹಿಂದುತ್ವಕ್ಕೆ ಆದ್ಯತೆ ಅಭಿವೃದ್ಧಿಗೆ ಬದ್ದನಾಗಿದ್ದೇನೆ ಎಂದು ಅವರು ತಿಳಿಸಿದರು.
ಬಂಟ್ವಾಳ ಮಂಡಲದ ಅದ್ಯಕ್ಷ ಚೆನ್ನಪ್ಪ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಪ್ತತಾಪ್ ಸಿಂಹ್ ನಾಯಕ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪ್ರಮುಖರಾದ ಜಗದೀಶ್ ಶೇಣವ, ಪೂಜಾ ಪೈ, ಹರಿಕೃಷ್ಣ ಬಂಟ್ವಾಳ, ಸುಲೋಚನ ಜಿ.ಕೆ.ಭಟ್, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ವಿಕಾಶ್ ಪುತ್ತೂರು, ಸಂದೇಶ್ ಶೆಟ್ಟಿ, ಸುಧಾಕರ್ ಶೆಟ್ಟಿ, ರಾಮ್ ದಾಸ್ ಬಂಟ್ವಾಳ, ಮಾದವ ಮಾವೆ, ಲಖಿತಾ ಆರ್.ಶೆಟ್ಟಿ, ಮೋನಪ್ಪ ದೇವಶ್ಯ, ರವೀಶ್ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ಪ್ರೇಮ, ಶ್ರೀಧರ್ ಶೆಟ್ಟಿ ಪುಳಿಂಚ, ಕಮಲಾಕ್ಷಿ ಕೆ.ಪೂಜಾರಿ, ಯಶೋಧರ ಕರ್ಬೆಟ್ಟು, ವಜ್ರನಾಥ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.