Sunday, January 19, 2025
ದಕ್ಷಿಣ ಕನ್ನಡಮೂಡಬಿದಿರೆರಾಜಕೀಯಸುದ್ದಿ

ಮೂಡುಬಿದಿರೆ ಪುರಸಭೆಯಿಂದ ಮತದಾರರ ಜಾಗೃತಿ ಆಂದೋಲನ – ಕಹಳೆ ನ್ಯೂಸ್

ಮೂಡುಬಿದಿರೆ: ಮತದಾನದ ಮಹತ್ವ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾಧಿಕಾರಿಯವರ ನಿರ್ದೇಶನದಂತೆ ತಾಲೂಕು ಸ್ವೀಪ್ ಸಮಿತಿ ಮತ್ತು ಮೂಡುಬಿದಿರೆ ಪುರಸಭೆ ವತಿಯಿಂದ ಮತದಾರರ ಜಾಗೃತಿ ಆಂದೋಲನ ಮಂಗಳವಾರ ಮೂಡುಬಿದಿರೆ ಪೇಟೆಯಲ್ಲಿ ನಡೆಯಿತು.

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಕೆ.ರಾಜು ಅವರು ಮತದಾರರನ್ನು ಜಾಗೃತಿ ಮೂಡಿಸುವ ದೊಂದಿಯ ಮೆರವಣಿಗೆಗೆ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಪ್ರಿಲ್ 26ರಂದು ನಡೆಯುವ ಮತದಾನದಲ್ಲಿ ಮತದಾನದ ಹಕ್ಕು ಇರುವವರೆಲ್ಲರು ಮತಚಲಾಯಿಸಿ ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕೆ ಎಲ್ಲರು ಸಹಕರಿಸಬೇಕು.
ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಮತವನ್ನು ಚಲಾಯಿಸಬೇಕೆಂದು ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಪೌರ ಕಾರ್ಮಿಕರು ದೊಂದಿಯ ಬೆಳಕಿನೊಂದಿಗೆ ಪೇಟೆಯಲ್ಲಿ ಜಾಗೃತಿ ಮೂಡಿಸಿದರು. ಬುಧವಾರ ಮಿಜಾರಿನ ಕುಡುಬಿ ಜನಾಂಗದವರ ಜತೆಗೂಡಿ ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಮತದಾನದ ಜಾಗೃತಿ ನಡೆಸಲಾಗುವುದು ಎಂದರು.
ಪುರಸಭಾ ಮುಖ್ಯಾಧಿಕಾರಿ ಸುಜಯ್ ಕುಮಾರ್ ಕೆ.ಎಸ್, ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಹಾಗೂ ಪುರಸಭೆ ಸಿಬಂದಿಗಳು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು