ಬೆಂಗಳೂರು: ಇಂದು ಸಂಸ್ಕೃತ ಭಾಷೆಯ ಆದಿಕವಿ ವಾಲ್ಮೀಕಿ ಮಹರ್ಷಿಗಳ ಜಯಂತಿಯಾಗಿದ್ದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
ಸಾಮಾನ್ಯ ಬೇಡನೊಬ್ಬ ವಿಶ್ವಮಾನ್ಯ ಕವಿಯಾಗಿ ಮನ್ನಣೆ ಗಳಿಸುವ ಮೂಲಕ ಅವರು ಶ್ರದ್ಧೆ ಮತ್ತು ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅತ್ಯುತ್ತಮ ನಿದರ್ಶನಗಳು. ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ರಾಮಾಯಣದ ಆದರ್ಶಗಳನ್ನು ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳೋಣ. ಅವರು ನೀಡಿದ ರಾಮರಾಜ್ಯದ ಪರಿಕಲ್ಪನೆ ಯನ್ನು ಸಾಕಾರಗೊಳಿಸೋಣ ಎಂದು ಅವರು ಆಶಿಸಿದ್ದಾರೆ.