Recent Posts

Sunday, January 19, 2025
ಸುದ್ದಿ

ಮುತ್ತೂಟ್ ಫೈನಾನ್ಸ್ನಿಂದ ಆರೋಗ್ಯ ಸಹಾಯನಿಧಿ ಚೆಕ್ ವಿತರಣೆ.

ಉಪ್ಪಿನಂಗಡಿ: ಮುತ್ತೂಟ್ ಫೈನಾನ್ಸ್ ಗ್ರೂಪ್ ಫೌಂಡೇಶನ್ ವತಿಯಿಂದ ಸಮಾಜದ ಬಡವರಿಗಾಗಿ ಪ್ರತಿ ತಿಂಗಳು ನೀಡುವ ಆರೋಗ್ಯ ಸಹಾಯ ನಿಧಿಯನ್ನು ಉಪ್ಪಿನಂಗಡಿ ಶಾಖೆಯಲ್ಲಿ ಶನಿವಾರದಂದು ವಿತರಿಸಲಾಯಿತು.

ಫಲಾನುಭವಿಗಳಿಗೆ ಚೆಕ್ ವಿತರಿಸಿದ ಮುತ್ತೂಟ್ ಫೈನಾನ್ಸ್ ಕ್ಲಸ್ಟರ್ ಮೆನೇಜರ್ ಎನ್.ಸಂದೇಶ್ ಶೆಣೈ “ಸಮಾಜದಿಂದ ಗಳಿಸಿದನ್ನು ಸಮಾಜಕ್ಕೆ ಸಮರ್ಪಿಸುವ ಸಂಸ್ಥೆಯ ಧ್ಯೇಯದಡಿ ಈ ಉತ್ತಮ ಯೋಜನೆ ಅನುಷ್ಠಾನಗೊಳ್ಳುತ್ತಿದೆ” ಎಂದರು.
ಈ ಸಂದರ್ಭ ಉಪ್ಪಿನಂಗಡಿ ಉದ್ಯಮಿಗಳಾದ ಸಂತೋಷ್ ಕಾಮತ್, ರಾಜೇಶ್ ಪೈ,ವಿವೇಕಾನಂದ ಪ್ರಭು ಭಾಗವಹಿಸಿದ್ದರು. ಸಂಸ್ಥೆಯ ಪ್ರಬಂಧಕಿ ಮಾಯಾಕ್ಷಣಿ ಶೆಟ್ಟಿ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response