Recent Posts

Sunday, January 19, 2025
ಉಡುಪಿರಾಜಕೀಯಸುದ್ದಿ

ಪ್ರಧಾನಿ ವಿರುದ್ಧ ಅವಹೇಳನ ಹೇಳಿಕೆ ; ಸಚಿವ ಶಿವರಾಜ್ ತಂಗಡಗಿ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇದಿಸುವಂತೆ ಬಿಜೆಪಿ ಯುವ ಮೋರ್ಚಾದಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ – ಕಹಳೆ ನ್ಯೂಸ್

ಉಡುಪಿ : “ಮೋದಿ ಮೋದಿ ಎನ್ನುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂದು ಅವಹೇಳನಕಾರಿ ಹೇಳಿಕೆ ನೀಡಿದ ಸಚಿವ ಶಿವರಾಜ್ ತಂಗಡಗಿಯನ್ನ ಉಡುಪಿ ಜಿಲ್ಲೆ ಗೆ ಪ್ರವೇಶ ನಿಷೇದ ಮಾಡಬೇಕೆಂದು ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲಾ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ದೇಶದ ಪ್ರಧಾನಿ ಹಾಗೂ ಯುವಕರ ಕುರಿತು ಅವಹೇಳನವಾಗಿ ಮಾತನಾಡಿದ ಶಿವರಾಜ್ ತಂಗಡಗಿ ಚುನಾವಣಾ ಸಂದರ್ಭದಲ್ಲಿ ಉಡುಪಿ ಜಿಲ್ಲೆಗೆ ಆಗಮಿಸಿದಲ್ಲಿ ಜಿಲ್ಲಾ ಯುವಮೋರ್ಚಾ ನೇತ್ರತ್ವದಲ್ಲಿ ಇಡೀ ಜಿಲ್ಲೆಯಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದರು.
ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಅರ್ಜುನ್ ಪ್ರಭು ಸಚಿನ್ ಸುವರ್ಣ ಪಿತ್ರೋಡಿ,ಕಾಪು ಮಂಡಲ ಅಧ್ಯಕ್ಷರಾದ ಸೋನು ಪೂಜಾರಿ ಪಂಗಳ,ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ರಾಜ್ ಪಡುಬಿದ್ರೆ,ವಿವಿಧ ಮಂಡಲದ ಯುವ ಮೋರ್ಚಾದ ಪದಾಧಿಕಾರಿಗಳದ ರಾಕೇಶ್ ಕೊಳಲಗಿರಿ, ಸಚಿನ್ ಪೂಜಾರಿ ಕುಕ್ಕುಡೆ, ಆಯುಷ್,ವಿಕಾಸ್ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು