Tuesday, April 8, 2025
ಸುದ್ದಿ

ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಜಾಹೀರಾತಿನಲ್ಲಿ ಪ್ರಾಧ್ಯಾಪಕ ದೀಕ್ಷಿತ್ ಕುಮಾರ್ – ಕಹಳೆ ನ್ಯೂಸ್

ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯು ಪ್ರಯೋಜಿಸಿರುವ ಇನ್ಫೋಸಿಸ್ ಸ್ಪ್ರಿಂ ಬೋರ್ಡ್ ವಿಭಾಗ ಇತ್ತೀಚಿಗೆ ತಮ್ಮ ಸಾಮಾಜಿಕ ಜಾಲತಾಣಗಳ ಮುಖಾಂತರ ಬಿಡುಗಡೆಗೊಳಿಸಿರುವ ಜಾಹೀರಾತಿನಲ್ಲಿ ಪುತ್ತೂರಿನ ಬನ್ನೂರು ನಿವಾಸಿಯಾಗಿರುವ ಪ್ರಸ್ತುತ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಚಿಕ್ಕಮಗಳೂರು ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ದೀಕ್ಷಿತ್ ಕುಮಾರ್ ರವರು ಕಾಣಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ಫೋಸಿಸ್ ಸಂಸ್ಥೆಯಿಂದ ಕೊಡ ಮಾಡುವ ಉಚಿತ ಕಲಿಕಾ ವೇದಿಕೆಯಾದ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ದೇಶಾದ್ಯಂತ ಈ ವೇದಿಕೆಗೆ ಕೊಡುಗೆ ನೀಡಿದ ನಾಲ್ಕು ಜನರನ್ನು ಆಯ್ಕೆ ಮಾಡಿ ತನ್ನ ಜಾಹೀರಾತನ್ನ ಸಿದ್ಧಪಡಿಸಿತ್ತು. ಒಬ್ಬ ಶಿಕ್ಷಕ ವಿದ್ಯಾರ್ಥಿಗಳಿಗೆ ಹೇಗೆ ತರಗತಿಯಿಂದ ಆಚೆಗೆ ಆನ್ಲೈನ್ ಶಿಕ್ಷಣವನ್ನು ಪರಿಚಯಿಸಬಹುದು ಎಂಬ ನೈಜ ಘಟನೆಯನ್ನು ಆಧರಿಸಿ ಈ ಜಾಹೀರಾತನ್ನು ಸಿದ್ಧಪಡಿಸಲಾಗಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನೆಲ್ಲೆಡೆ ಇದು ಪ್ರಚಾರವಾಗಲಿದೆ. ಯಾವುದೇ ವಿದ್ಯಾರ್ಥಿಗಳು ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡು ತಮ್ಮ ಪಠ್ಯ ಹಾಗೂ ಪಠ್ಯೇತರ ವಿಷಯಗಳಿಗೆ ಸಂಬಂಧಿಸಿದಂತೆ 20,000ಕ್ಕೂ ಅಧಿಕ ಕೋರ್ಸುಗಳನ್ನು ಉಚಿತವಾಗಿ ಶಿಕ್ಷಣವನ್ನು ಪಡೆಯಲು ಇನ್ಫೋಸಿಸ್ ಸಂಸ್ಥೆಯು ಸ್ಪ್ರಿಂಗ್ ಬೋರ್ಡ್ ಮೂಲಕ ಅವಕಾಶವನ್ನು ನೀಡಿದೆ. ದೀಕ್ಷಿತ್ ಕುಮಾರ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸ್ಪ್ರಿಂಗ್ ಬೋರ್ಡ್ ಗೆ ಸಂಬಂಧಿಸಿದ ನೋಂದಾವಣೆಯ ವಿಡಿಯೋ ಒಂದನ್ನು ಸಿದ್ಧಪಡಿಸಿದ್ದು ಇದು ಇನ್ಫೋಸಿಸ್ ಸಂಸ್ಥೆಯ ಪ್ರಶಂಸೆಗೆ ಪಾತ್ರವಾಗಿತ್ತು. ಕಳೆದ ಹಲವು ವರ್ಷಗಳಿಂದ  ನಿರಂತರವಾಗಿ ಅನೇಕ ಕಾಲೇಜುಗಳಲ್ಲಿ ವಿಶೇಷ ಕಾರ್ಯಾಗಾರಗಳ ಮೂಲಕ ದೇಶಾದ್ಯಂತ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ವೇದಿಕೆಯನ್ನು ಪರಿಚಯಿಸಿದ್ದು ವಿದ್ಯಾರ್ಥಿಗಳು ಈ ಶಿಕ್ಷಣವನ್ನು ಪಡೆಯಲು ಮಾರ್ಗದರ್ಶಕರಾಗಿರುತ್ತಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ