Recent Posts

Monday, January 20, 2025
ಸುದ್ದಿ

ಮೂಡುಬಿದಿರೆ : ಲೋಕಸಭಾ ಚುನಾವಣೆ ಹಿನ್ನಲೆ : ಪೊಲೀಸರಿಂದ ಪೇಟೆಯಲ್ಲಿ ಪಥ ಸಂಚಲನ – ಕಹಳೆ ನ್ಯೂಸ್

ಮೂಡುಬಿದಿರೆ: ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಮೂಡುಬಿದಿರೆಯ ಪೊಲೀಸ್ ಸಿಬಂದಿಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬಂಧಿಗಳು ಇಂದು ಬೆಳಿಗ್ಗೆ ಪಥ ಸಂಚಲನ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 242 ಬೆಟಾಲಿಯನ್ ಸಿಆರ್ ಪಿ ಕೆ.ಎ.ಮಹಾಧಿಕ್ ನೇತೃತ್ವದಲ್ಲಿ ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಬಳಿಯಿಂದ ಆರಂಭಗೊAಡು ಮೂಡುಬಿದಿರೆ ಪೇಟೆ ಮೂಲಕ ಕನ್ನಡ ಭವನದವರೆಗೆ ಪಥ ಸಂಚಲನ ನಡೆಯಿತು.

ಪೊಲೀಸ್ ಉಪ ನಿರೀಕ್ಷಕರಾದ ನಂಜಾ ನಾಯ್ಕ್, ಮಂಜುನಾಥ್ ಬೋರ್ಕರ್ ಮತ್ತು ಸಿಬಂಧಿಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 20 ಮಂದಿ ಸಿಬಂದಿಗಳು ಸಹಿತ 50 ಮಂದಿ ಈ ಪಥ ಸಂಚಲನದಲ್ಲಿ ಪಾಲ್ಗೊಂಡರು.