Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಲೋಕಸಭಾ ಚುನಾವಣೆ ಹಿನ್ನಲೆ : ನಿರ್ವಹಣಾ ಸಮಿತಿ ಸಭೆ – ಕಹಳೆ ನ್ಯೂಸ್

ಪುತ್ತೂರು : ಲೋಕಸಭಾ ಚುನಾವಣೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವಾರವರ ಅಧ್ಯಕ್ಷತೆಯಲ್ಲಿ ಬಿಜೆಪಿ ಕಛೇರಿಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ವಿಭಾಗಗಳ ಪ್ರಮುಖರಿಂದ ಒಟ್ಟು ಕ್ಷೇತ್ರದ ಚುನಾವಣೆಯ ಕೆಲಸಗಳ ಪ್ರಗತಿಯ ವಿವರಣೆಯನ್ನು ಚುನಾವಣಾ ನಿರ್ವಹಣ ಸಮಿತಿ ಸಂಚಾಲಕರಾದ ಚನಿಲ ತಿಮ್ಮಪ್ಪ ಶೆಟ್ಟಿಯವರು ಅವಲೋಕಿಸಿದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಏ.2 ರಂದು ಬೈಪಾಸ್ ರಸ್ತೆಯ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಪ್ರಮುಖರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಪುತ್ತೂರು ಚುನಾವಣೆಯ ಪ್ರಭಾರಿ ಸುಲೋಚನ ಜಿ.ಕೆ ಭಟ್,ಪಕ್ಷದ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸುನೀಲ್ ಆಳ್ವಾ,ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ,ಚುನಾವಣಾ ನಿರ್ವಹಣಾ ಸಹ ಸಂಚಾಲಕರಾದ ಉಮೇಶ್ ಗೌಡ, ಪ್ರಸನ್ನ ಮಾರ್ತ, ಪ್ರ.ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಜಯಶ್ರೀ ಶೆಟ್ಟಿ, ಯುವರಾಜ್ ಪೆರಿಯತ್ತೋಡಿ, ನಿತೀಶ್ ಕುಮಾರ್ ಶಾಂತಿವನ, ಜೀವಂಧರ್ ಜೈನ್, ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಸಹಜ್ ರೈ ಬಳಜ್ಜ, ರಾಜೇಶ್ ಬನ್ನೂರು, ಲೋಕೇಶ್ ಹೆಗ್ಡೆ, ಅನಿಲ್ ತೆಂಕಿಲ ಮೊದಲಾದವರು ಉಪಸ್ಥಿತರಿದ್ದರು.