Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಹೊರ ರಾಜ್ಯದ ಯುವಕನ ಮೇಲೆ ಮನೆಮಂದಿಯಿಂದ ಹಲ್ಲೆ; ಸಿಸಿ ಟಿವಿಯಲ್ಲಿ ಸೆರೆ-ಕಹಳೆ ನ್ಯೂಸ್

ಮಂಗಳೂರು: ಹೊರ ರಾಜ್ಯದ ಯುವಕನ ಮೇಲೆ ಮನೆ ಮಂದಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಹೊರವಲಯದ ಅರ್ಕುಳ ಎಂಬಲ್ಲಿ ನಡೆದಿದೆ.

ಮನೆ ಮಂದಿ ಹೊರ ರಾಜ್ಯದ ಯುವಕನಿಗೆ ಬೆಲ್ಟ್, ಚೈಯರ್ ನಲ್ಲಿ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಯಾವುದೋ ಸೊತ್ತಿನ ಬಗ್ಗೆ ವಿಚಾರಣೆ ನಡೆಸುವ ಮನೆಮಂದಿ ಹಲ್ಲೆಗೊಳಗಾಗುತ್ತಿರುವ ಯುವಕನಲ್ಲಿ ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಮನೆಯದೇ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು ಮನೆಯ ಇಬ್ಬರು ಸದಸ್ಯರು ಇಬ್ಬರು ಸೇರಿ ಹಲ್ಲೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಯುವಕನ ಜೊತೆಗಿರುವ ವ್ಯಕ್ತಿಗೂ ಹಲ್ಲೆ ನಡೆಸಲಾಗಿದ್ದು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಮಂಗಳೂರು ತನಿಖೆ ನಡೆಸುತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು