Saturday, November 23, 2024
ದಕ್ಷಿಣ ಕನ್ನಡಮಂಗಳೂರುರಾಜಕೀಯಸುದ್ದಿ

ಜೀವ ಪಣಕ್ಕಿಟ್ಟು ಜೀವನ ನಡೆಸುವ ಮೀನುಗಾರರ ಕುಟುಂಬಗಳಿಗೆ ಭದ್ರತೆ ಬೇಕು: ಕ್ಯಾಪ್ಟನ್ ಬ್ರಿಜೇಶ್ ಚೌಟ –ಕಹಳೆ ನ್ಯೂಸ್

ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಮಂಗಳೂರು ನಗರದ ಬಿಜೆಪಿ ಜಿಲ್ಲಾ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆ ಮೀನುಗಾರರ ಪ್ರಕೋಷ್ಠ ವತಿಯಿಂದ ಆಯೋಜಿಸಲಾಗಿದ್ದೆ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಮೀನುಗಾರರು ಕಡಲಿನೊಂದಿಗೆ ತಾಯಿ-ಮಕ್ಕಳ ಸಂಬAಧವುಳ್ಳವರು. ಕಡಲಿನ ರಕ್ಷಣೆಗೆ ಸರ್ಕಾರಗಳು ವ್ಯವಸ್ಥೆ ರೂಪಿಸುವ ಮೊದಲೇ ಕಡಲ ರಕ್ಷಣೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಈ ಹಿಂದೆ ಇದ್ದ ಸರ್ಕಾರಗಳಾಗಲಿ, ವ್ಯವಸ್ಥೆಗಳಾಗಲಿ ನಮ್ಮ ಮೀನುಗಾರರ ಆದ್ಯತೆ, ಅವರಿಗೆ ಬೇಕಾದ ಮೂಲಸೌಕರ್ಯಗಳ ಕುರಿತಂತೆ ತೋರಿದ ಕಾಳಜಿ ತುಂಬಾ ಕಡಿಮೆ. ಆದರೆ ನಮ್ಮ ಪ್ರಧಾನಿ ಮೋದಿಜಿಯವರು ಬಂದ ಮೇಲೆ ಮೀನುಗಾರರ ಸಮಸ್ಯೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಮೀನುಗಾರಿಕಾ ಇಲಾಖೆ ಸ್ಥಾಪಿಸಿ ಮೀನುಗಾರರ ಬೆನ್ನೆಲುಬಾಗಿ ನಿಂತಿದ್ದಾರೆನ್ನಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕರಾದ ಶ್ರೀ ರಾಮಚಂದ್ರ ಬೈಕಂಪಾಡಿ, ಮಾಜಿ ಸಚಿವರಾದ, ಶ್ರೀ ನಾಗರಾಜ ಶೆಟ್ಟಿ, ಮಂಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸತೀಶ್ ಕುಂಪಲ, ಮಂಗಳೂರು ಮೇಯರ್ ಆದ ಶ್ರೀ ಸುಧೀರ್ ಶೆಟ್ಟ ಕಣ್ಣೂರು, ಬಿಜೆಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕರಾದ ಶ್ರೀ ಗಿರೀಶ್ ಕರ್ಕೇರಾ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು