ಪುತ್ತೂರು : ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ| ನಾಗರಾಜು ಎಂ 31ವರ್ಷಗಳ ಸೇವೆಯ ಬಳಿಕ ಮಾರ್ಚ್ 31ರಂದು ಸೇವಾ ನಿವೃತ್ತಿ ಹೊಂದಲಿರುವರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಡುಕೋತನಹಳ್ಳಿಯವರಾದ ಇವರು ತಮ್ಮ ಪದವಿ ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿಪೂರೈಸಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲದಿಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಸೇಲಂನ ವಿನಾಯಕವಿಶ್ವವಿದ್ಯಾನಿಲಯದಿಂದ ಎಂ ಫಿಲ್ ಪದವಿಯನ್ನು ಪಡೆದಿರುತ್ತಾರೆ. ಮಂಡ್ಯದ ಭಾರತೀ ಕಾಲೇಜಿನಲ್ಲಿ 13ವರ್ಷಗಳ ಕಾಲ ಸೇವೆಸಲ್ಲಿಸಿದ
ಬಳಿಕ ಇವರು 2006ರಲ್ಲಿ ಫಲೋಮಿನಾ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನೇಮಕಗೊಂಡಿರುತ್ತಾರೆ.ಇವರು ಹಲವುಬಾರಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರವಿಭಾಗದ ಅಧ್ಯಯನಮಂಡಳಿಯ (ಬೋರ್ಡ್ ಆಫ್‌ಸ್ಟಡೀಸ್) ಸದಸ್ಯರಾಗಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಸೇವೆಸಲ್ಲಿಸಿರುತ್ತಾರೆ. ತಮ್ಮ ಸೇವಾವಧಿಯಲ್ಲಿ ಇವರು ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿಯಾಗಿ, ಇಕೋ ಕ್ಲಬ್‌ನಸಂಯೋಜಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ಇವರು ಪತ್ನಿ ಶ್ರೀಮತಿ ಸುಜಾತ ಹಾಗೂ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪುತ್ರರಾದನಿತಿನ್ ಗೌಡ ಹಾಗೂ ಸಂಜಯ್ ಗೌಡರೊಡನೆ ಮಂಡ್ಯದಲ್ಲಿ ಸಂತೃಪ್ತಜೀವನ ನಡೆಸುತ್ತಿದ್ದಾರೆ. ಇವರ ನಿವೃತ್ತಜೀವನವು ಸುಖ, ಶಾಂತಿ,ನೆಮ್ಮದಿಗಳಿಂದ ಕೂಡಿರಲಿ ದೇವರು ಇವರಿಗೆ ಆಯುರಾರೋಗ್ಯನೀಡಿ ಕಾಪಾಡಲಿ ಎಂದು ಕಾಲೇಜಿನ ಸಂಚಾಲಕರಾದ ಅತಿ ವಂ| ಲಾರೆನ್ಸ್‌ಮಸ್ಕರೇನಸ್, ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ, ಆಡಳಿತಮಂಡಳಿಯ ಸದಸ್ಯರು, ಅಧ್ಯಾಪಕರು, ಆಡಳಿತಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿರುತ್ತಾರೆ.