Sunday, January 19, 2025
ಕಡಬಕ್ರೈಮ್ದಕ್ಷಿಣ ಕನ್ನಡಸುದ್ದಿ

ಕಡಬದಲ್ಲಿ ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು ; ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು..!! – ರಸ್ತೆ ತಡೆದು ತಡರಾತ್ರಿ ಪ್ರತಿಭಟನೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ- ಉಪ್ಪಿನಂಗಡಿ ರಾಜ್ಯ ರಸ್ತೆಯ ಮರ್ದಾಳ ಜಂಕ್ಷನ್ ನಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಾ.30 ರ ಸಂಜೆ ನಡೆದಿತ್ತು.ಈ ಅಪಘಾತದಲ್ಲಿ ನೆಕ್ಕಿತ್ತಡ್ಕದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂಬವರು ಮೃತಪಟ್ಟಿದ್ದರು.ಆದರೆ ಡಿಕ್ಕಿ ಹೊಡೆದ ಕಾರು ಶರವೇಗದಲ್ಲಿ ಸಂಚರಿಸಿತ್ತು

ಎಸ್ಕೇಪ್ ಆಗಿರುವ ಕಾರಿನ ಕುರಿತು ಸಾರ್ವಜನಿಕರು ಮಾಹಿತಿ ಕಲೆ ಹಾಕಿದ್ದು ಸದ್ಯ ಆ ಕಾರು ಮರ್ಧಾಳ ಸಮೀಪದ ಪನ್ಯದಲ್ಲಿರುವ ಮನೆಯಲ್ಲಿ ತಂದು ನಿಲ್ಲಿಸಲಾಗಿದೆ ಎನ್ನಲಾಗಿದೆ. ಕಾರಿನಲ್ಲಿ ಅಕ್ರಮ ಗೋವುಗಳ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.ಕಾರಿನಲ್ಲಿ 2 ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರಿನಲ್ಲಿದ್ದ ಜಾನುವಾರನ್ನು ಕಾರಿನಿಂದ ಕೆಳಗಿಳಿಸಿ ಕಟ್ಟಿ ಹಾಕಲಾಗಿದೆ. ಸ್ಥಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಹಿಸಿದ್ದು ಅಪಘಾತ ಎಸಗಿದ ಆರೋಪಿಗಳನ್ನು ಬಂಧಿಸುವ ತನಕ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹಿಂದೂ ಸಂಘಟನೆಯ ಪ್ರಮುಖರು ತಿಳಿಸಿದ್ದು, ಆಸ್ಪತ್ರೆ ಯ ಮುಂದೆ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೋಲಿಸರು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು