ಕಡಬದಲ್ಲಿ ಅಕ್ರಮ ಗೋಸಾಗಾಟದ ಕಾರು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು ; ಆರೋಪಿ ರಶೀದ್ ಬಂಧಿಸಿ, ಅಮಾಯಕ ವಿಠಲ ರೈ ಕುಟುಂಬಕ್ಕೆ ತಕ್ಷಣ ಸರಕಾರ ಪರಿಹಾರ ಘೋಷಿಸಿ – ಬಿಜೆಪಿ ಮುಖಂಡ ಅರುಣ್ ಪುತ್ತಿಲ ಆಗ್ರಹ – ಕಹಳೆ ನ್ಯೂಸ್
ಅಕ್ರಮ ಗೋವು ಸಾಗಟದ ವಾಹನ ಡಿಕ್ಕಿ ವ್ಯಕ್ತಿ ಸಾವು ಸಂಭವಿಸಿದ ಘಟನೆ ಕಡಬದ ಮರ್ದಾಳದಲ್ಲಿ ನಡೆದಿದೆ.
ಮರ್ಧಾಳ ಜಂಕ್ಷನ್ ನಲ್ಲಿ ರಸ್ತೆ ದಾಟುತ್ತಿದ್ದ ಮರ್ಧಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂಬವರು ಅಕ್ರಮ ಗೋವು ಸಾಗಟದ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.
ಆರೋಪಿಗಳು ಕಾರು ಮರ್ಧಾಳ ಸಮೀಪದ ರಶೀದ್ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ದನವನ್ನು ಪಕ್ಕದ ತೋಟದಲ್ಲಿ ಕಟ್ಟಿ ಪರಾರಿಯಾಗಿದ್ದಾರೆ.
ಅಕ್ರಮ ಗೋಸಾಗಟ ಜಿಲ್ಲೆಯಾದ್ಯಂತ ನಡೆಯುತ್ತಿದೆ ಸರ್ಕಾರ ಒಂದು ವರ್ಗದ ಜನರ ಓಲೈಕೆಯಿಂದಾಗಿ ಕಡಬದಲ್ಲಿ ಅಮಾಯಕ ಹಿಂದೂವಿನ ಮರಣವಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಈ ಘಟನೆಯನ್ನು ಖಂಡಿಸಿದ್ದಾರೆ.
ಅಮಾಯಕ ವಿಠಲ ರೈ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ಘೋಷಿಸಬೇಕು ಎಂದರು.
ಶೀಘ್ರ ನೈಜ ಆರೋಪಿಗಳ ಬಂಧನವಾಗಬೇಕು ಇಲ್ಲದಿದ್ದರೆ ಮುಂದೆ ನಡೆಯುವ ಹೋರಾಟಕ್ಕೆ ಸರ್ಕಾರವೇ ಹೊಣೆಯಾಗ್ತದೆ ಎಂದರು.