Recent Posts

Sunday, January 19, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಏ.1ರಿಂದ -7 ರವರೆಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ “ಜಿ.ಎಲ್. ಶಾಪಿಂಗ್’ : “ವರುಷದ ಹರುಷ” ವಿಶೇಷ ಶಾಪಿಂಗ್ ಹಬ್ಬ – ಕಹಳೆ ನ್ಯೂಸ್

ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಪುತ್ತೂರು. ಮೂಡಬಿದ್ರೆ, ಸುಳ್ಯ, ಹಾಸನ ಮತ್ತು ಕುಶಾಲನಗರದಲ್ಲಿರುವ ತಮ್ಮ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಗ್ರಾಹಕರಿಗೆ ಜಿ.ಎಲ್. ಶಾಪಿಂಗ್ ಹಬ್ಬ “ವರುಷದ ಹರುಷ” ಎಂಬ ವಿಶಿಷ್ಟ ಶಾಪಿಂಗ್ ಹಬ್ಬವನ್ನು ಏ.1 ರಿಂದ 7ರವರೆಗೆ ಆಯೋಜಿಸಿದೆ.


ಗ್ರಾಹಕರಿಗೆ ವಜ್ರದ ಆಭರಣಗಳು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಅದ್ಭುತ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿನ್ನಾಭರಣ ಖರೀದಿಗೆ ಪ್ರತಿ ಗ್ರಾಂಗೆ ರೂ.150/-ರವರೆಗೆ ರಿಯಾಯಿತಿ, ವಜ್ರಾಭರಣಗಳ ಮೇಲೆ ರೂ.7,000/- ವರೆಗೆ ಪ್ರತಿ ಕ್ಯಾರೆಟ್ ಮೇಲೆ ರಿಯಾಯಿತಿ ಹಾಗೂ ಬೆಳ್ಳಿಯ ಆಭರಣಗಳ ಮೇಲೆ ರೂ.2000/- ಪ್ರತಿ ಕೆಜಿಗೆ ರಿಯಾಯಿತಿ ನೀಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ಆಯ್ಕೆ ಲಭ್ಯವಿದ್ದು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ಚಿನ್ನ ಹಾಗೂ ವಜ್ರಾಭರಣಗಳ ಸಂಗ್ರಹವಿದ್ದು, ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.

ಪುರಾತನ ಆಭರಣಗಳ ವಿಭಾಗ “ಪ್ರಾಚಿ”ಯಲ್ಲಿ ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಆ್ಯಂಟಿಕ್ ಚಿನ್ನಾಭರಣಗಳ ವಿವಿಧ ವಿನ್ಯಾಸಗಳು ಲಭ್ಯವಿದೆ.

ಅದೇ ರೀತಿ “ಗ್ಲೋ” ವಜ್ರಾಭರಣ ವಿಭಾಗದಲ್ಲಿ ಸುಮಾರು 2,000ಕ್ಕೂ ಮಿಕ್ಕಿದ ಡಿಸೈನ್‌ಗಳಲ್ಲಿ ಪ್ರಜ್ವಲಿಸುವ ಅದ್ಭುತ ವಜ್ರಾಭರಣಗಳ ಸಂಗ್ರಹವಿದೆ.

“ಪಾರ್ಥ” ಪುರುಷರ ಚಿನ್ನಾಭರಣಗಳ ವಿಭಾಗದಲ್ಲಿ ಪುರುಷರ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ ಆ್ಯಂಟಿಕ್ ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ ವಾಚ್ ಚೈನ್ಸ್ ಅಲ್ಲದೇ ಇನ್ನು ಹಲವು ವಿನೂತನ ವಿನ್ಯಾಸದ ಆಭರಣಗಳ ಸಂಗ್ರಹವಿದೆ.

ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ಧವಾಗಿದ್ದು, ಪರಿಪೂರ್ಣತೆ ಮತ್ತು ಅಸಾಧಾರಣ ಕರಕುಶಲತೆಯ ನೈಪುಣ್ಯತೆಯಿಂದ ಹೊರಹೊಮ್ಮಿರುವ ಈ ವಿಶಿಷ್ಟ ಸಂಗ್ರಹ ಎಲ್ಲರ ಕಣ್ಮನ ಸೆಳೆಯುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.