Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಶಿಕ್ಷಣಸುದ್ದಿ

ಪೂರ್ವ ಪ್ರಾಥಮಿಕ ತರಗತಿ ( ಎಲ್ ಕೆ ಜಿ, ಯು ಕೆ ಜಿ) ಮಕ್ಕಳ ಕಲಿಕಾ ಪ್ರಗತಿಯ ಪರಿಶೀಲನಾ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ :  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಪೂರ್ವ ಪ್ರಾಥಮಿಕ ತರಗತಿ ( ಎಲ್ ಕೆ ಜಿ, ಯು ಕೆ ಜಿ) ಮಕ್ಕಳ ಕಲಿಕಾ ಪ್ರಗತಿಯ ಪರಿಶೀಲನಾ ಕಾರ್ಯಕ್ರಮ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರವಿ ಅಂಚನ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ರಾಜ್ಯಮಟ್ಟದ ಕ್ರೀಡಾಪಟು ನಿತಿನ್ ಶೆಟ್ಟಿ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಕೋರಿ ತಾನು ಕಲಿತ ನರಿಕೊಂಬು ಶಾಲೆಗೆ ಸದಾ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪೂರ್ವ ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಂದ ಶೈಕ್ಷಣಿಕ ವರ್ಷದಲ್ಲಿ ಕಲಿತ ಚಟುವಟಿಕೆಗಳ ಪ್ರದರ್ಶನ ಹಾಗೂ ಪೋಷಕರ ಸಭೆಯು ನಡೆದು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಶಾಲಾವೃದ್ಧಿ ಸಮಿತಿ ಉಪಾಧ್ಯಕ್ಷ ಉಷಾಲಾಕ್ಷಿ, ತಾಯಂದಿರ ಸಮಿತಿಯ ಉಪಾಧ್ಯಕ್ಷ ಪ್ರಿಯ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಗಳಾದ ಜಯಪ್ರಕಾಶ್, ಪ್ರಸಾದ್ ಬೋರುಗುಡ್ಡೆ,ದಾಮೋದರ್, ಕೇಶವ, ಚಿತ್ರ, ಶಶಿ, ಜಯಶ್ರೀ, ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪ್ರೇಮ ಸ್ವಾಗತಿಸಿ, ಶಿಕ್ಷಕಿ ಸುನಿತಾ ವಂದಿಸಿ,ಶಿಕ್ಷಕಿ ದಿವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು