Saturday, November 23, 2024
ದಕ್ಷಿಣ ಕನ್ನಡಪುತ್ತೂರುವಾಣಿಜ್ಯಸುದ್ದಿ

20 ವರ್ಷಗಳಿಂದ ಗ್ರಾಹಕ ಸ್ನೇಹಿಯಾಗಿ ಮನೆ ಮಾತಾಗಿರುವ ಮಂಗಲ್ ಸ್ಟೋರ್ ಇನ್ಮುಂದೆ ಜಿ.ಎಲ್.ಒನ್ ಮಾಲ್ ನಲ್ಲಿ ಎ.1ರಂದು ಅದ್ಧೂರಿ ಲೋಕಾರ್ಪಣೆ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಜಿ.ಎಲ್.ಒನ್ ಮಾಲ್ ಈಗಾಗಲೇ ಮಲ್ಟಿಪ್ಲೆಕ್ಸ್ , ಫುಡ್ ಕೋರ್ಟ್, ಮಕ್ಕಳ ಮನರಂಜನಾ ಮಳಿಗೆ ಹಾಗೂ ಬ್ರ‍್ಯಾಂಡೆಡ್ ಬಟ್ಟೆಗಳ ಖರೀದಿಗೆ ಹೆಸರುವಾಸಿಯಾಗಿದೆ. ಇದೀಗ ಜಿ.ಎಲ್.ಒನ್ ಮಾಲ್ ನ ಹಿರಿಮೆಗೆ ಹೊಚ್ಚ ಹೊಸ ಗರಿ ಎಂಬAತೆ ಕಳೆದ 20 ವರ್ಷಗಳಿಂದ ತನ್ನ ಗ್ರಾಹಕ ಸ್ನೇಹಿಯಾಗಿ ಮನೆ ಮಾತಾಗಿರುವ ಮಂಗಲ್ ಸ್ಟೋರ್ ಇಲ್ಲಿನ ಪ್ರಥಮ ಮಹಡಿಯನ್ನು ಅಲಂಕರಿಸಲಿದೆ..

ಮಲ್ಟಿ ನ್ಯಾಷನಲ್ ಕಂಪೆನಿಗಳಿಗೆ ಸಡ್ಡು ಹೊಡೆಯುವ ಪುತ್ತೂರಿನ, ಪುತ್ತೂರಿಗರ ಹೆಮ್ಮೆಯ ಬ್ರ‍್ಯಾಂಡ್ ಮಂಗಲ್ ಹೈಪರ್ ಮಾರ್ಕೆಟ್ ಏ. 1 ರಂದು ಜಿ.ಎಲ್.ಒನ್ ಮಾಲ್ ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್ ರವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಲ್ ಸ್ಟೋರ್ ಗುಣಮಟ್ಟದ ಉತ್ಪ , ಸ್ಪರ್ಧಾತ್ಮಕ ಬೆಲೆ, ಗ್ರಾಹಕ ಸ್ನೇಹಿ ಸಿಬ್ಬಂದಿಗಳಿಗೆ ಪ್ರಖ್ಯಾತಿ ಪಡೆದಿದೆ. ನಗುಮೊಗದ ಸ್ವಾಗತದೊಂದಿಗೆ ಆರಂಭಗೊಳ್ಳುವ ಇಲ್ಲಿನ ಆಹ್ಲಾದಕರ ಖರೀದಿ ವಾತಾವರಣ, ಗ್ರಾಹಕರ ಅಚ್ಚುಮೆಚ್ಚಿನ ಖರೀದಿ ತಾಣವಾಗಿ ರೂಪುಗೊಳಿಸಿದೆ. ಭರವಸೆಯ ಖರೀದಿ – ಸಂತೃಪ್ತಿಯ ಸೇವೆ ಈ ಹೈಪರ್ ಮಾರ್ಕೆಟ್ ನ ಮೂಲ ಧಾತು ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರೀಮಿಯಂ ಸ್ವೀಟ್ಸ್ ಗಳ ವಿಶೇಷ ಕೌಂಟರ್
ಮAಗಲ್ ಹೈಪರ್ ಮಾರ್ಕೆಟ್ ನಲ್ಲಿ ಗ್ರಾಹಕರ ದಿನನಿತ್ಯದ ಅವಶ್ಯಕತೆಗಳಿಗೆ ಬೇಕಾಗುವ ಎಲ್ಲವೂ ಒಂದೇ ಸೂರಿನಡಿ ಲಭ್ಯವಿದ್ದು, ಉಚಿತ ಪಾರ್ಕಿಂಗ್ನೊAದಿಗೆ ಆರಾಮವಾಗಿ, ಖುಷಿ ಖುಷಿಯಾಗಿ ಕೈಗೆಟಕುವ ಬೆಲೆಯಲ್ಲಿ ಶಾಪಿಂಗ್ ಮಾಡಬಹುದಾಗಿದೆ. ವಿಶೇಷ ಅಕರ್ಷಣೆಯಾಗಿ ಪ್ರೆಸ್ಟೋ ಕಂಪೆನಿಯ ಪ್ರೀಮಿಯಂ ಸ್ವೀಟ್ಸ್ ಗಳ ವಿಶೇಷ ಕೌಂಟರ್ ಸೌಲಭ್ಯವಿದೆ.

ಸರ್ವಮಂಗಲ್.. ಏನಿದು.?
ಯಾವುದೇ ಪೂಜೆ ಇರಲಿ, ಶುಭಸಮಾರಂಭವಿರಲಿ ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳಿಗಾಗಿ ಹಲವು ಕಡೆ ಹೋಗಬೇಕೆಂದಿಲ್ಲ. ಗ್ರಾಹಕರ ಅಗತ್ಯದ ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳ ಪಟ್ಟಿಯನ್ನು ಮುಂಗಡವಾಗಿ ನೀಡಿ, ಮನೆಬಾಗಿಲಿಗೆ, ಯಾ ಸಭಾಭವನಕ್ಕೆ ತರಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಯಾವುದೇ ಜಂಜಾಟವಿಲ್ಲದೇ, ನಿರಾಳವಾಗಿ ಸಂಭ್ರಮಾಚರಣೆಯನ್ನು ಆನಂದಿಸಬಹುದಾಗಿದೆ.

ವಾರದ 7 ದಿನ 12*7 ಸೇವೆ
ಗ್ರಾಹಕರ ಅನುಕೂಲಕ್ಕಾಗಿ ವಾರದ ಏಳು ದಿನಗಳಲ್ಲಿಯೂ ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ ಕಾರ್ಯನಿರ್ವಹಿಸಲಿರುವ ಈ ಮಳಿಗೆಯಲ್ಲಿ ಎಲ್ಲಾ ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳು, ತಾಜಾ ಹಣ್ಣುಹಂಪಲು, ಪ್ಲಾಸ್ಟಿಕ್ ಉತ್ಪನ್ನಗಳು, ನಂದಿನಿ ಹಾಲು, ಹಾಲಿನ ಉತ್ಪನ್ನಗಳು, ಕ್ಯಾಂಪ್ಕೋ ಉತ್ಪನ್ನಗಳು, ಫ್ರೆಶ್ ಜ್ಯೂಸ್, ಸಾವಯವ, ನೈಸರ್ಗಿಕ ಆಯುರ್ವೇದ ಉತ್ಪನ್ನಗಳು, ಫುಡ್ ಕೋರ್ಟ್ ಸೌಲಭ್ಯವಿರುತ್ತದೆ.

ಲಕ್ಕಿ ಬಾಕ್ಸ್ – ಗಿಫ್ಟ್ ವೋಚರ್
ಶುಭಾರಂಭದ ಪ್ರಯುಕ್ತ ಉಚಿತ ಕೂಪನ್ಗಳನ್ನು ಸಂಸ್ಥೆ ನೀಡುತ್ತಿದ್ದು, ಅದೃಷ್ಟ ಶಾಲಿ ಗ್ರಾಹಕರಿಗೆ ಬಹುಮಾನವು ಸಿಗಲಿದೆ. ಈ ಬಹುಮಾನ ತಮ್ಮದಾಗಿಸಿಕೊಳ್ಳಬೇಕಿದ್ರೆ ನೀವು ಮಾಡಬೇಕಾದುದು ಇಷ್ಟೇ ಗ್ರಾಹಕರು ತಮ್ಮ ಸಂಪೂರ್ಣ ಮಾಹಿತಿಗಳನ್ನು ಕೂಪನ್ನಲ್ಲಿ ತುಂಬಿಸಿ ಏ. 5ರೊಳಗೆ ಮಳಿಗೆಯಲ್ಲಿಟ್ಟಿರುವ ಲಕ್ಕಿ ಬಾಕ್ಸ್ ನೊಳಗಡೆ ಹಾಕಬೇಕು. ಏ. 10ರಂದು ಲಕ್ಕಿ ಡ್ರಾ ನಡೆಯಲಿದ್ದು, ವಿಜೇತ ಗ್ರಾಹಕರು ರೂ. 500, 1000 ಹಾಗೂ 2000 ಮೌಲ್ಯದ ಗಿಫ್ಟ್ ವೋಚರ್ ಗಳನ್ನು ಪಡೆಯಬಹುದಾಗಿದೆ.