ಪುಣೆ: ಶ್ರೀ ಛತ್ರಪತಿ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ 2018 ರ ಇಂಟರ್ ಜೋನ್ 5 ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಹರ್ಯಾಣ ಸ್ಟೀಲರ್ಸ್ ಎದುರು 42-34ರ ಜಯ ಸಾಧಿಸಿದೆ.
ಇದರೊಂದಿಗೆ ಬೆಂಗಳೂರು ಬುಲ್ಸ್ ಝೋನ್ ಬಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿಸಿದೆ. ಬೆಂಗಳೂರಿನಿಂದ ಪವನ್ ಕುಮಾರ್ ಭರ್ಜರಿ 20 ಪಾಯಿಂಟ್‌ಗಳನ್ನು ಸೇರಿಸಿದರು.
ಮತ್ತೊಬ್ಬ ಆಟಗಾರ ರೋಹಿತ್ ಕುಮಾರ್ ಕೂಡ 8 ಪಾಯಿಂಟ್ ಕಲೆ ಹಾಕಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದರು. ಸ್ಟೀಲರ್ಸ್ ಪರ ವಿಕಾಶ್ ಖಂಡೋಲಾ ಉತ್ತಮ ಆಟವಾಡಿದರು.
ಒಟ್ಟು 29 ರೈಡಿಂಗ್ ಪಾಯಿಂಟ್ಸ್, 7 ಟ್ಯಾಕ್ಲ್, 4 ಆಲೌಟ್, 2 ಎಕ್ಸ್ಟ್ರಾ ಪಾಯಿಂಟ್ ಗಳು ಸೇರಿಸಿ ಒಟ್ಟು 42 ಅಂಕಗಳು ಬೆಂಗಳೂರು ಖಾತೆ ಸೇರಿಕೊಂಡವು. ಇನ್ನು ಅಕ್ಟೋಬರ್ 31ರಂದು ಪಾಟ್ನಾದಲ್ಲಿ ಬೆಂಗಳೂರು ತಂಡ ಆತಿಥೇಯ ಪಾಟ್ನಾ ಸವಾಲು ಸ್ವೀಕರಿಸಲಿದೆ.