Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ಸಾರ್ವಜನಿಕ ಸ್ಥಳದಲ್ಲಿ ಬಿತ್ತಿ ಪತ್ರ ಅಂಟಿಸಿದರೆ ದಂಡ : ಶಾಸಕ ಅಶೋಕ್ ಕುಮಾರ್ ರೈ ಆದೇಶ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ , ಗೋಡೆಗಳ ಮೇಲೆ ಭಿತ್ತಿ ಪತ್ರ ಅಂಟಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪುತ್ತೂರು ನಗರದ ಸೌಂಧರ್ಯವನ್ನು ಕಾಪಾಡುವ ಕೆಲಸವನ್ನು ನಗರಸಭೆ ಕೈಗೊಳ್ಳಬೇಕು ಎಂದು ಶಾಸಕರಾದ ಅಶೋಕ್ ರೈ ನಗರಸಭಾ ಆಯುಕ್ತರಿಗೆ ಸೂಚನೆಯನ್ನು ನೀಡಿದ್ದಾರೆ.


ಪುತ್ತೂರು ನಗರದಾಧ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ರೈಲ್ವೇ ಅಂಡರ್ ಪಾಸ್ ಬಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಭಿತ್ತಿ ಪತ್ರವನ್ನು ಅಂಟಿಸಿ ನಗರದ ಸೌಂಧರ್ಯಕ್ಕೆ ಧಕ್ಕೆ ತಂದಿರುವ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕರು ಆಯುಕ್ತರಿಗೆ ಸೂಚನೆಯನ್ನು ನೀಡಿ ಇಂದಿನಿಂದಲೇ ( ಎ.1) ಕಾರ್ಯಾಚರಣೆ ನಡೆಸಿ ಎಲ್ಲಾ ಭಿತ್ತಿ ಪತ್ರಗಳನ್ನು ತೆರವು ಮಾಡಿ ಅಂಥವರಿಗೆ ದಂಢ ವಿಧಿಸುವಂತೆ ಸೂಚಿಸಿದ್ದಾರೆ. ಈಗಾಗಲೇ ನಗರದೆಲ್ಲೆಡೆ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರವನ್ನು ಅಂಟಿಸಿದ್ದು ಬಹುತೇಕ ಅನಧಿಕೃತವಾಗಿದ್ದು ಮಾತ್ರವಲ್ಲದೆ ನಗರದ ಸೌಂದರ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು