Saturday, November 23, 2024
ಸುದ್ದಿ

ಇಂದಿನಿoದ ವಿದ್ಯುತ್ ದರ ಪ್ರತಿ ಯುನಿಟ್ ಗೆ 1.10 ರೂ. ಕಡಿಮೆ – ಕಹಳೆ ನ್ಯೂಸ್

ಬೆಂಗಳೂರು : ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಮತ್ತು ಹೊಸ ಹಣಕಾಸು ವರ್ಷದ ಆರಂಭದಲ್ಲಿ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂದಿನಿAದ ಕೆಇಆರ್‌ಸಿ ನೂತನ ವಿದ್ಯುತ್ ದರ ಜಾರಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಪರಿಷ್ಕರಣೆ ಪರಿಷ್ಕರಣೆ ಮಾಡಿದ್ದು, ಇಂದಿನಿAದ ನೂತನ 100 ಯುನಿಟ್ ಗಿಂತ ಹೆಚ್ಚು ಬಳಕೆ ಮಾಡುವ ಗ್ರಾಹಕರಿಗೆ ಯುನಿಟ್ ಗೆ 1ರೂ 10 ಪೈಸೆ ಕಡಿತ ಮಾಡುವುದಾಗಿ ತಿಳಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

15 ವರ್ಷಗಳ ಬಳಿಕ ವಿದ್ಯುತ್ ದರ ಇಳಿಕೆ ಕಂಡಿದೆ. 2024-25ನೇ ಸಾಲಿಗೆ ಅನ್ವಯವಾಗುವಂತೆ ಕೆಇಆರ್‌ಸಿ ಆದೇಶ ಇಂದಿನಿAದ ಜಾರಿಗೆ ಬಂದಿದೆ. ಎಲ್ಲಾ ಎಸ್ಕಾಂಗಳಲ್ಲೂ ಏಕರೂಪದ ದರ ಜಾರಿಗೆ ಬಂದಿದೆ. ಮುಂದಿನ ತಿಂಗಳಿನ ಬಿಲ್ ನಲ್ಲಿ ಹೊಸ ದರ ಪರಿಷ್ಕರಣೆಯಾಗಲಿದೆ.

ಈ ಹಿಂದೆ ಪ್ರತಿ ಯುನಿಟ್ ಗೆ 0-100ರ ವರೆಗೆ 4.75 ಪೈಸೆ ಇತ್ತು. 100ರ ಮೇಲಿನ ಬಳಕೆಯ ಪ್ರತಿ ಯುನಿಟ್ ಗೆ 7 ರೂಪಾಯಿ ಇತ್ತು. ಇಂದಿನಿAದ 100 ಯುನಿಟ್ ಮೇಲಿನ ಬಳಕೆ ದಾರರ ಪ್ರತಿ ಯುನಿಟ್ ಗೆ 5.90 ರೂಪಾಯಿ ಮಾತ್ರ ಪಾವತಿ ಮಾಡಬೇಕು. ಈಗಾಗಲೇ 100 ಯುನಿಟ್ ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ನೀಡಲಾಗ್ತಿದೆ. ಈಗ ಸದ್ಯ ಹೊಸ ದರ ಪರಿಷ್ಕರಣೆ 100 ಯುನಿಟ್ ಗಿಂತ ಹೆಚ್ಚು ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.