Recent Posts

Sunday, January 19, 2025
ಸುದ್ದಿ

ನಿಯಮ ಗಾಳಿಗೆ ತೂರಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು: ಉಡುಪಿ ಡಿಸಿ – ಕಹಳೆ ನ್ಯೂಸ್

ಉಡುಪಿ: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನಿಗದಿಪಡಿಸಿದ ದರಗಳನ್ನು ಸಾರ್ವಜನಿರಿಗೆ ಕಾಣುವಂತೆ ಪ್ರಶ್ನಿಸಬೇಕೆಂದು ಉಡುಪಿ ಡಿಸಿ ಅಧಿಕಾರಿಗಳ ಪರಿಶೀಲನಾ ತಂಡವನ್ನು ರಚಿಸಿದ್ದು, ನಿಯಮ ಗಾಳಿಗೆ ತೂರಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯಿದೆಯ ಪ್ರಕಾರ ಇದು ಕಡ್ಡಾಯ ಕೂಡ. ಆದರೆ ಹಲವೆಡೆ ಸಾರ್ವಜನಿಕರಿಗೆ ಕಾಣದಂತೆ ಆಸ್ಪತ್ರೆಯ ಮೂಲೆಯಲ್ಲಿ ದರಪಟ್ಟಿ ಅಳವಡಿಸಿ ರೋಗಿಗಳಿಗೆ ವಂಚಿಸಲಾಗುತ್ತಿದೆ. ಇನ್ನು ಹಲವು ಆಸ್ಪತ್ರೆಗಳಲ್ಲಿ ಈ ಹಿಂದೆ ನಮೂದಿಸಿದ್ದ ದರಗಳೇ ಇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಆಸ್ಪತ್ರೆಯಲ್ಲಿ ಆಪರೇಶನ್ನ ವೆಚ್ಚ, ವೈದ್ಯರ ಸಮಾಲೋಚನಾ ವೆಚ್ಚ, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹೀಗೆ ನಾನಾ ಪರೀಕ್ಷೆಗಳ ದರ, ಎಕ್ಸ್ರೇ, ಸ್ಕ್ಯಾನ್, ಸಿಟಿ ಸ್ಕ್ಯಾನ್ ಮುಂತಾದುವುಗಳಿಗೆ ತಗಲುವ ದರವನ್ನು ಕಡ್ಡಾಯವಾಗಿ ಪ್ರಶ್ನಿಸಬೇಕು ಹೀಗೆ ಹಲವು ನಿಯಮಗಳನ್ನು ಜಿಲ್ಲಾಡಳಿತ ರೇಟ್ ಲಿಸ್ಟ್ ಮೂಲಕ ಹಾಕುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ.