Recent Posts

Wednesday, December 18, 2024
ಸುದ್ದಿ

ಎ.2ರಿಂದ 5ರವರೆ ಬನ್ನಡ್ಕ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ

ಮೂಡುಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನೂತನ ಧ್ವಜಸ್ತಂಭ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು ವರ್ಷಾವಧಿ ನೇಮೋತ್ಸವವು ಎಪ್ರಿಲ್ 2ರಿಂದ 5ರವರೆಗೆ ವೇದಮೂರ್ತಿ ಅನಂತ ಪದ್ಮನಾಭ ಅಸ್ರಣ್ಣರ ನೇತ್ರತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಜಗತ್ಪಾಲ್ ಯಸ್.ಹೆಗ್ಡೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ನೂತನ ಗೋಪುರ ನಿರ್ಮಾಣ, ತೀರ್ಥಬಾವಿ, ಪಂಜುರ್ಲಿ ಗುಡಿ, ಅಂಗಣಕ್ಕೆ ಕಲ್ಲು ಹಾಸುವುದು,ಕ್ಷೇತ್ರ ಪಾಲನ ಕಟ್ಟೆ ರಚನೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.

ಎಪ್ರಿಲ್ 2 ರಂದು ಉಗ್ರಾಣ ಪೂಜೆ, ವಾಸ್ತುಪೂಜೆ, ಗಣಹೋಮ, ಮಾರ್ನಾಡು ಬೀಡಿನಲ್ಲಿ ರಾತ್ರಿ ನವಕ ಹೋಮ ನಡೆಯಲಿದೆ. ಎಪ್ರಿಲ್ 3ರಂದು ಬೆಳಿಗ್ಗೆ ಮಾರ್ನಾಡು ಬೀಡಿನಿಂದ ಶ್ರೀ ಕ್ಷೇತ್ರ ಬನ್ನಡ್ಕಕ್ಕೆ ಬನ್ನಡ್ಕತಾಯಿ ಭಂಡಾರ ತರುವುದು, ಸಾಯಂಕಾಲ ಧ್ವಜಸ್ತಂಭ, ಆದಿವಾಸ ದೈವಗಳ ಬಿಂಬಾದಿವಾಸ-ಮಂಡಲ ರಚನೆ ಕಲಶ ಪೂಜೆ ನಡೆಯಲಿದೆ. ಎಪ್ರಿಲ್ 4ರಂದು ರಾತ್ರಿ ವರ್ಷಾವಧಿ ನೇಮೋತ್ಸವ, ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಸ್‍ಕೆಎಫ್‍ನ ಆಡಳಿತ ನಿರ್ದೇಶಕ ಡಾ.ರಾಮಕೃಷ್ಣ ಆಚಾರ್, ರಾಜೇಂದ್ರ ಬಲ್ಲಾಳ್ ಕಾರ್ಕಳ, ಅಮರನಾಥ ಶೆಟ್ಟಿ ಹಂಡಿಂಜೆಗುತ್ತು, ದಿನೇಶ್ ಮಾರ್ನಾಡು, ಹರೀಶ್ ಹೆಗ್ಡೆ ಪಡುಮಾರ್ನಡು, ಎಸ್‍ಕೆಡಿಆರ್‍ಡಿಪಿ ಯೋಜನಾಧಿಕಾರಿ ಸುನೀತ ಇವರನ್ನು ಸನ್ಮಾನಿಸಲಾಗುವುದು ಎಂದ ಅವರು ಕ್ಷೇತ್ರದ ಬಗ್ಗೆ ಸವಿವಾರವಾದ ಮಾಹಿತಿಯನ್ನು ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ ದಾನಿಗಳ ಸಹಕಾರದಿಂದ ನಡೆಯುವ ಬನ್ನಡ್ಕ ಕ್ಷೇತ್ರದ ಅಬಿವೃದ್ಧಿ ಕಾರ್ಯಗಳು ನಡೆದಿದ್ದು ತಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದರು. ಅನುವಂಶಿಕ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್ ಪ್ರಧಾನ ಕಾರ್ಯದರ್ಶಿ ಜಗತ್ಪಾಲ್ ಎಸ್.ಹೆಗ್ಡೆ ಮತ್ತು ಕಾರ್ಯದರ್ಶಿ ಹರೀಶ್ ಹೆಗ್ಡೆ ಉಪಸ್ಥಿತರಿದ್ದರು.