Sunday, January 19, 2025
ಸುದ್ದಿ

ಬಂಟ್ವಾಳ : ಭಾರತ ಚುನಾವಣಾ ಆಯೋಗದ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ತಾಲೂಕಿನ ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 17 ಮತ್ತು 18ಕ್ಕೆ ಭೇಟಿ – ಕಹಳೆ ನ್ಯೂಸ್

ಭಾರತ ಚುನಾವಣಾ ಆಯೋಗದ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್  IAS ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್ ಸಂಖ್ಯೆ 17 ಮತ್ತು 18ಕ್ಕೆ ಭೇಟಿ ನೀಡಿದರು. ಧ್ಯೇಯ ಆಧಾರಿತ ಪರಿಕಲ್ಪನೆಯಡಿ ನಿರ್ಮಾಣವಾಗುತ್ತಿರುವ ಬೂತ್ ಸಂಖ್ಯೆ 17ರನ್ನು ವೀಕ್ಷಿಸಿ ತಾವೂ ಬಣ್ಣ ಹಚ್ಚಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಶೌಚಾಲಯ, ಕುಡಿಯುವ ನೀರು, ರ್ಯಾಂಪ್ ವ್ಯವಸ್ಥೆ ಪರಿಶೀಲಿಸಿ ಮತದಾನದ ದಿನದಂದು ಮತದಾರರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ವೇಳೆ ರಾಜ್ಯ ಮಟ್ಟದ ಮಾಸ್ಟರ್ ಟ್ರೈನರ್ ಪ್ರಮೀಳಾ, ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಲೋಕೇಶ್ ಸಿ., ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಸ್ವೀಪ್ ನೋಡಲ್ ಅಧಿಕಾರಿ ರಾಹುಲ್ ಕಾಂಬಳೆ, ತಾಲೂಕು ಪಂಚಾಯತ್ ಸಿಬ್ಬಂದಿ ಪ್ರಕಾಶ್, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಎಸ್ಡಿಎ ಬಾಲಕೃಷ್ಣ, ತಾಲೂಕು ಐಇಸಿ ಸಂಯೋಜಕ ರಾಜೇಶ್, ಕಲಾ ಶಿಕ್ಷಕ ಧನಂಜಯ್, ಗ್ರಾಮ ಪಂಚಾಯತ್ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು