Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ವಿಟ್ಲ – ಹಣದ ವಿಚಾರದಲ್ಲಿ ಗಲಾಟೆ ; ಗಣೇಶ್ ಎಂಬ ಯುವಕನಿಗೆ ಮಾರಕಾಯುಧದಿಂದ ಆಲಿ ಎಂಬುವವ ದಾಳಿ ನಡೆಸಿದ ಆರೋಪ – ಆಸ್ಪತ್ರೆಗೆ ದಾಖಲು – ಕಹಳೆ ನ್ಯೂಸ್

ವಿಟ್ಲ : ವ್ಯಕ್ತಿಯೊಬ್ಬರಿಗೆ ಹಣದ ವಿಚಾರವಾಗಿ ಮಾರಕಾಯುಧದಿಂದ ದಾಳಿ ನಡೆಸಿದ ಘಟನೆ ಕೇಪು ಗ್ರಾಮದ ಎದುರುಕಜೆ ಎಂಬಲ್ಲಿ ನಡೆದಿದೆ.

ಎದುರುಕಜೆ ನಿವಾಸಿ ಆಲಿ ಎಂಬಾತನು ಗಣೇಶ ಎಂಬವರಿಗೆ ಮಾರಕಾಯುಧದಿಂದ ದಾಳಿ ನಡೆಸಿದ್ದಾನೆ. ಆಲಿಯು ಸ್ಥಳೀಯರೊಂದಿಗೆ ಹಣಕಾಸಿನ ವಿಚಾರವಾಗಿ ಸುಮಾರು ಜನರಿಗೆ ಪಂಗನಾಮ ಹಾಕಿದ್ದಾನೆ. ಅಲ್ಲದೆ ಈತನ ಹಣಕಾಸಿನ ವಿಚಾರದಲ್ಲಿ ವಿಟ್ಲ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಣೇಶ ಎಂಬವರೊಂದಿಗೆ ಆಲಿಯು ವ್ಯವಹಾರ ಹೊಂದಿದ್ದು, ಗಣೇಶರವರಿಗೆ ನಾಳೆ ನಡೆಯುವ ಶುಭ ಕಾರ್ಯದ ನಿಮಿತ್ತ ಆಲಿಯು ತೆಗೆದುಕೊಂಡ ಹಣವನ್ನು ಮರುಪಾವತಿಗೆ ಕೇಳಿದಾಗ, ಗಣೇಶರವರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿನ್ನ ಹಣ ಕೊಡುವುದಿಲ್ಲ ತಾಕತ್ತಿದ್ದರೆ ವಸೂಲಿ ಮಾಡು ಎಂದು ದರ್ಪದಿಂದ ಹೇಳಿ, ಆಟೋದಲ್ಲಿದ್ದ ತಲವಾರು ತೆಗೆದು ಗಣೇಶರವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಗಣೇಶ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಆಲಿ ಕೂಡ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.