Sunday, January 19, 2025
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಎನ್ನೆಂಸಿ; ಕಲಾ ಪದವಿ ಮತ್ತು ಮಾನವಿಕಾ ಸಂಘದಿಂದ ಅಧ್ಯಯನ ಪ್ರವಾಸ –ಕಹಳೆ ನ್ಯೂಸ್

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ಕಲಾ ಪದವಿ ವಿಭಾಗ ಮತ್ತು ಮಾನವಿಕಾ ಸಂಘದ ವತಿಯಿಂದ ದಿನಾಂಕ 30.05.2024 ಶನಿವಾರದಂದು ಮೈಸೂರಿನ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಶೈಕ್ಷಣಿಕ ಅಧ್ಯಯನ ಪ್ರವಾಸ ಹಮ್ಮಿಕೊಳ್ಳಲಾಯಿತು.

ಕಾಲೇಜಿನ ಕಲಾ ಪದವಿ ವಿಭಾಗದ 40 ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡದಿAದ ಮೈಸೂರಿನ ಜಿಲ್ಲಾ ನ್ಯಾಯಾಲಯ, Sಐಗಿ ಪುಸ್ತಕ ಮುದ್ರಣಾಲಯ, ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ, ಸೈಂಟ್ ಫಿಲೋಮಿನಾ ಚರ್ಚ್, ಮೈಸೂರಿನ ಅರಮನೆ, ಕೃಷ್ಣ ರಾಜ ಸಾಗರ ಅಣೆಕಟ್ಟು ಮತ್ತು ಉದ್ಯಾನವನ ಇತ್ಯಾದಿ ಪ್ರೇಕ್ಷಣೀಯ ಹಾಗೂ ಅಧ್ಯಯನ ಯೋಗ್ಯ ಸ್ಥಳಗಳಿಗೆ ಭೇಟಿ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಮತಾ ಕೆ, ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಚಿತ್ರಲೇಖ ಕೆ. ಎಸ್, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ವಿಷ್ಣು ಪ್ರಶಾಂತ್ ಬಿ, ಕಾಲೇಜಿನ ಕಚೇರಿ ಅಧೀಕ್ಷರಾದ ನಿವೇದಿತಾ ಎಂ. ಈ ಅಧ್ಯಯನ ಪ್ರವಾಸದ ನೇತೃತ್ವವನ್ನು ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು